Sunday, 29 March 2020

ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |


ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |
ಏಕೆ ಗೋಪಾಲ ಕರೆಯುತಾನೆ ? ಪ
ಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |
ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||
ಬಣ್ಣಿಸುತಲಿ ತಿರುಗುತಾನೆ - ಇವನೇನೆ |
ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ1
ಹವಳ ಸರವ ತೋರುತಾನೆ - ದುಂಡು ಮುತ್ತಿನ - |
ಧವಳ ಹಾರವ ನೀಡುತಾನೆ - ಹಾಸಿಗೆಯ ಮೇಲೆ ||
ಪವಡಿಸಬೇಕೆನುತಾನೆ - ಇವನೊಡನಿರಲು ನ-|
ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2
ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|
ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||
ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |
ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3


No comments:

Post a Comment