Sunday, 29 March 2020

ಏಕಾರತಿಯನೆತ್ತುವ ಬನ್ನಿ ನಮ್ಮ


ಏಕಾರತಿಯನೆತ್ತುವ ಬನ್ನಿ ನಮ್ಮ
ಲೋಕನಾಥನ ಸಿರಿ ಪಾದವ ಬೆಳಗುವ ಪ.
ತುಪ್ಪದೊಳ್ಬೆರಸಿದ ಮೂರು ಬತ್ತಿಯನಿಟ್ಟು
ಒಪ್ಪುವ ದೀಪಕ್ಕೆ ದೀಪ ಹಚ್ಚಿ ||
ತಪ್ಪದೆ ಸಕಲ ಪಾಪಂಗಳ ಹರಿಸುವ
ಅಪ್ಪ ವಿಠಲನ ಪದಾಬ್ಜವ ಬೆಳಗುವ 1
ಹರುಷದಿ ಏಕಾರತಿ ಬೆಳಗಿದ ಫಲ
ನರಕದಿಂದುದ್ಧಾರ ಮಾಡುವುದು ||
ಪರಮ ಭಕುತಿಯಿಂದ ಬೆಳಗುವ ನರರನು
ಹರಿ ತನ್ನ ಹೃದಯದಿ ಧರಿಸುವನಯ್ಯ 2
ಅನ್ಯ ಚಿಂತೆ ಮಾಡದೆ ಅನ್ಯರ ಭಜಿಸದೆ ಮ
ತ್ತನ್ಯ ದೇವರನು ಸ್ಮರಿಸದೆ ಅ ||
ನನ್ಯವಾಗಿ ಶ್ರೀ ಪುರಂದರವಿಠಲನ
ಪುಣ್ಯನಾಮಗಳ ಧ್ಯಾನಿಸುತ 3


No comments:

Post a Comment