Tuesday, 31 March 2020

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ


ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿರೆ ಪ
ಮಸ್ತಕದಲಿ ಮಾಣಿಕದ ಕಿರೀಟ
ಕಸ್ತುರಿ ತಿಲಕವು ಹೊಳೆವ ಲಲಾಟ ||
ಹಸ್ತದಿ ಕೊಳಲನೂದುವ ನರೆ ನೋಟ
ಕೌಸ್ತುಭದೆಡ ಬಲದೊಳು ಲೋಲಾಟ1
ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿವನ ಮಾಲೆಯಿಟ್ಟ ಕೊರಳು
ಉಗುರಿಗೆ ಹೊನ್ನ ಮುದ್ರಿಕೆಯಿಟ್ಟ ಬೆರಳು
ಸೊಗಸಿನ ನಾಭಿಯು ತಾವರೆ ಅರಳು 2
ಉಡುದಾರ ಒಡ್ಯಾಣ ಸಕಲಾಭರಣ
ಬೆಡಗಿನ ಪೀತಾಂಬರ ರವಿಕಿರಣ ||
ಕಡಗ ಗಗ್ಗರ ಗೆಜ್ಜೆ ಇಕ್ಕಿದ ಚರಣ
ಒಡೆಯ ಪುರಂದರ ವಿಠಲನ ಕರುಣ3


No comments:

Post a Comment