Friday, 20 March 2020

ಕುಂದಣದಾರುತಿ ತಂದು ಬೆಳಗಿರೆ kundanadaratiya tandu belagire


ಕುಂದಣದಾರುತಿ ತಂದು ಬೆಳಗಿರೆ ಪ
ಇಂದಿರವರಗೆ ಮಂದರ ಧರಗೆ
ವಂದಿಸುವರ ಭವಬಂಧ ಬಿಡಿಸುವಗೆ 1
ವಿಜಯಸಾರಥಿಗೆ ದ್ವಿಜವರ ಗಮನಗೆ
ಗಜ ವರದಗೆ ಪಂಕಜ ಭವಪಿತಗೆ 2
ಸುರಪರಿ ಪಾಲಗೆ ಶರಧಿಜ ಲೋಲಗೆ
ಶರಣರ ಪೊರಿವ “ಕಾರ್ಪರ ನರಸಿಂಹಗೆ” 3


No comments:

Post a Comment