Sunday, 29 March 2020

ಎಂದಿಗಾದರು ನಿನ್ನ ನಂಬಿದೆ


ಎಂದಿಗಾದರು ನಿನ್ನ ನಂಬಿದೆ - ಚೆಲ್ವ - |
ಮಂದರಧರ ಮದನಜನಕ |
ವೃಂದಾವನಪತಿ ಗೋವಿಂದ ಪ
ತರುಣಿಯ ಮಾನವನು ಕಾಯ್ದೆ - ಅಂದು - |
ದುರುಳ ತನ್ನ ಸುತನ ಕೊಲಲು ಒದಗಿ ಕಂಬದಿ ಬಂದೆ ||
ಕರುಣದಿ ಶಿಲೆಯನುದ್ಧರಿಸಿದೆ ತನ್ನ - |
ಮರಣಕಾಲಕೆ ನಾಗರನೆಂದರೆ ಮುದದಿ
ಮುಂದೆ ನಿಂದೆ ಗೋವಿಂದ 1
ಧ್ರುವ - ವಿಭೀಷಣ - ರುಕ್ಮಾಂಗದರು ನಿನ್ನ ವರಿಸಲು |
ಆ ವ್ಯಾಸ ನಾರದ ಬಲಿ ಮುಖ್ಯ ಕಲಿಪಾರ್ಥನು ||
ಪವನಸುತನು ಅಂಬರೀಷನು - ತ್ರೈ - |
ಭುವನವರಿಯೆ ನಿನ್ನ ನೆನೆಯೆ ಪದವನಿತ್ತೆ ಗೋವಿಂದ2
ದುರಿತ ವಿನಾಶ ದೋಷದೂರನೆ - ಜಗದ್ - |
ಭರಿತ ದೈತ್ಯದಳಸಂಹಾರ ಶರಣು ಚಾರುಚರಿತ್ರ ||
ಕರಿವರದ ಪುರಂದರವಿಠಲ ಕಾಯೊ |
ಶರಣಹೃದಯ ಸರಸಿಜ ಪರಮಪಾವನ ಗೋವಿಂದ 3


No comments:

Post a Comment