Thursday, 26 March 2020

ಇವಗೇಕೆ ಪರಿಮಳ ಇವಗೇಕೆ ಶೃಂಗಾರ


ಇವಗೇಕೆ ಪರಿಮಳ ಇವಗೇಕೆ ಶೃಂಗಾರ |
ನವನೀತ ಚೋರ ನಾರುವ ಗೊಲ್ಲಗೆ ಪ
ಹೊಲಸು ಮೈಯವಗೇಕೆ ಹೊಸ ಕಸ್ತೂರಿಯ ಲೇಪ |
ತಲೆದೋರದವಗೇಕೆ ದಟ್ಟ ಪುನುಗು |
ಬಲು ಕೇಶದವಗೇಕೆ ಬಾವನ್ನದ ಲೇಪ |
ಸಲೆಘೋರರೂಪಿಗೇಕೆ ನೊಸಲ ಸಾದು 1
ತುಲಸಿಮಾಲೆಯ ಧರಿಸಿದವಗೇಕೆ ಜವ್ವಾಜಿ |
ಕೊಲೆಗಡುಕಗೀಕೆ ಕುಂಕುಮತಿಲಕ ||
ಅಲೆದಾಡುವವಗೇಕೆ ಅಂಗರಾಗದ ಸುಖ|
ಕಳವು ಮಾಡುವವಗೇಕನಂಗ ಸೊಬಗು 2
ಪರಸತಿಯ ಬಯಸುವಗೆ ಪನ್ನಗಶಯನವೇಕೆ
ಹರಿದಾಡುವನಿಗೇಕೆ ಅಡಪ - ಡವಿಕೆ ||
ಸಿರಿದೇವಿ ಶೃಂಗಾರಗೈದು ವರಿಸಿದ ಬಳಿಕ |
ಧರೆಗಧಿPನಾದನೀ ಪುರಂದರ ವಿಠಲ 3


No comments:

Post a Comment