Sunday, 29 March 2020

ಊಟಕ್ಕೆ ಬಂದೆವು ನಾವು ನಿನ್ನ


ಊಟಕ್ಕೆ ಬಂದೆವು ನಾವು ನಿನ್ನ -
ಕೋಟಲೆಗಳ ಬಿಟ್ಟು ಅಡಿಗೆ ಮಾಡಮ್ಮ ಪ.
ಕತ್ತಲಕ್ಕುತಲಿವೆ ಕಣ್ಣು - ಬಲು -
ಬತ್ತಿ ಬರುತಲಿವೆ ಕೈಕಾಲ ಜುಮ್ಮ ||
ಹೊತ್ತು ಹೋಗಿಸಬೇಡವಮ್ಮ - ಒಂದು -
ತುತ್ತನಾದರು ಮಾಡಿ ಇಕ್ಕುವುದು ಧರ್ಮ 1
ಒಡಲೊಳಗುಸಿರಿಲ್ಲವಮ್ಮ - ಗಳಿಗೆ -
ತಡವಾದರೀ ಪ್ರಾಣ ಉಳಿವುದಿಲ್ಲಮ್ಮ ||
ನುಡಿಯು ಚಿತ್ತಕೆ ಬರಲಮ್ಮ - ಒಂದು -
ಪಿಡಿ ಅಕ್ಕಿ ಅನ್ನದಿ ಕೀರ್ತಿ ಪಡೆಯಮ್ಮ........... 2
ಹೊನ್ನರಾಶಿಗಳನು ಸುರಿಯೆ - ಕೋಟಿ -
ಕನ್ನೆ ಧರಿತಿಯ ಧಾರೆಯನೆರೆಯೆ ||
ಅನ್ನದಾನಕೆ ಇನ್ನು ಸರಿಯೆ - ನಮ್ಮ -
ಚೆನ್ನ ಪುರಂದರವಿಠಲನೊಳ್ ಬೆರೆಯೆ........... 3


No comments:

Post a Comment