Thursday, 19 March 2020

ಘನ ದಯಾನಿಧಿಯಾದ ಪವನರಾಯನೆ ghana dayanidhi pavanarayane

ಘನ ದಯಾನಿಧಿಯಾದ ಪವನರಾಯನೆ ನಮೊಪುನರಪಿ ನಮೋ ನಿನ್ನ ಪಾದ ಸರಸಿರುಹಕೆಮಣಿದು ಬೇಡಿಕೊಂಬೆ ನೀನೆವೆ ಗತಿ ಎಂದುನಿನಗಿಂತ ಹಿತರಾರು ಜೀವನಕೆಸನಕಾದಿ ವಂದ್ಯನ್ನ ಆಜ್ಞದಿಂದಲಿ ಪರಮಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆಅಣುರೂಪಗಳಿಂದ ನಿಂದು ಮಾಡಿದ ಕೃತ್ಯಮನಸಿಜ ವೈರಿಯಿಂದ ತಿಳಿಯಲೊಶವೆಹೀನ ಮನಸಿನಿಂದ ಬದ್ಧನಾದವ ನಾನುಗುಣರೂಪ ಕ್ರಿಯಗಳ ವಿದಿತನೇನೊತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡುಎನಿಪ ಸಾಸಿರ ರೂಪದಿಂದ ಸತಿಯ ಸಹಿತತೃಣ ಮೊದಲಾದ ಜೀವ ಪ್ರಕೃತಿ ಕಾಲಕರ್ಮಅನುಸರವಾಗಿ ಕ್ರಿಯಗಳನೆ ಮಾಡಿಅನಿಮಿತ್ಯ ಬಾಂಧವನೆನಿಸಿ ಸಜ್ಜನರಿಗೆe್ಞÁನ ಭಕ್ತ್ಯಾದಿಗಳು ನೀನೆ ಇತ್ತುಮನದಲ್ಲಿ ಹರಿ ರೂಪ ಸಂದರುಶನವಿತ್ತುಘನೀ ಭೂತವಾದ ಆನಂದದಿಂದವಿನಯದಿಂದಲ್ಲಿ ಪೊರೆವ ಉಪಕಾರವನು ಸ್ಮರಿಸಲಾಪೆನೆ ಎಂದಿಗೆ ಗುಣನಿಧಿಯೆಇನ ಕೋಟಿ ತೇಜ ಗುರು ವಿಜಯ ವಿಠ್ಠಲರೇಯಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ 1
ಮಟ್ಟತಾಳ
ಮಿನುಗುವ ಕಂಠದಲಿ ಎರಡು ದಳದ ಕಮಲಕರ್ಣಿಕಿ ಮಧ್ಯದಲಿ ಸತಿ ಸಹಿತದಲಿದ್ದುವನಜಾಸನವಿಡಿದು ತೃಣಜೀವರ ತನಕತನುವಿನೊಳಗೆ ವಿಹಿತವಾದ ಶಬ್ದಗಳನ್ನುನೀವೆ ಮಾಡಿ ಅವರವರಿಗೆ ಕೀರ್ತಿಘನತೆಯನೇ ಇತ್ತು ಕಾಣಿಸಿಕೊಳ್ಳದಲೆಮನುಜಾಧಮರಿಗೆ ಮಾಯವ ಮಸಗಿಸಿಕೊನೆ ಗುಣದವರನ್ನ ನಿತ್ಯ ದುಃಖಗಳಿಂದದಣಿಸುವಿ ಪ್ರಾಂತ್ಯದಲಿ ಕಡೆಮೊದಲಿಲ್ಲದಲೆದನುಜ ಮರ್ದನ ಗುರು ವಿಜಯ ವಿಠ್ಠಲರೇಯನಿನಗಿತ್ತನು ಈ ಪರಿಯ ಸ್ವತಂತ್ರ ಮಹಿಮೆಯನು 2
ರೂಪಕತಾಳ
ನಾಸಿಕ ಎಡದಲ್ಲಿ ಭಾರತಿ ತಾನಧೋಶ್ವಾಸ ಬಿಡಿಸುವಳು ನಿನ್ನಾಜ್ಞದೀನಾಸಿಕ ಬಲದಲ್ಲಿ ಈಶನಾಜ್ಞದಿ ಊಧ್ರ್ವಶ್ವಾಸ ಬಿಡಿಸಿ ಪೊರೆವಿ ಜೀವರನ್ನೂತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದುಸಾಸಿರದಾರು ಶತದಿನ ಬಂದಶಲಿಭೂ ಶಬ್ದದಿಂದಲ್ಲಿ ಹರಿಯನ್ನೇ ಪೂಜಿಸುತ್ತಆಶೀತಿ ನಾಲ್ಕು ಲಕ್ಷ ಜೀವರಿಗೆಲೇಸು ಮಿಶ್ರಗಳೆಲ್ಲ ಅದರಂತೆ ನಿರ್ದೇಶವಾಸಗೈಸುವಿ ನೀನೆ ಪ್ರಾಂತ್ಯದಲ್ಲಿಈ ಸುe್ಞÁನವೆ ತಿಳಿದುಪಾಸನೆ ಮಾಳ್ಪರಿಗೆಶ್ವಾಸ ಮಂತ್ರದ ಫಲವ ಶೇಷವೀವಕಾಶಿನಿಂದಲಿ ಕೋಟಿ ದ್ರವ್ಯ ಪ್ರಾಪುತದಂತೆವಾಸುದೇವನೆ ಇದಕೆ ತುಷ್ಟನಾಗೀಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪಈ ಸಂಜ್ಞದಿಂದಲ್ಲಿ ದಿವಿಜರೆಲ್ಲದಾಸರಾಗಿಹರಯ್ಯಾ ನಿನ್ನ ಪಾದವ ಬಿಡದೆಕ್ಲೇಶಾನಂದಗಳೆಲ್ಲ ನಿನ್ನಾಧೀನ ದೇಶ ಕಾಲ ಪೂರ್ಣ ಗುರು ವಿಜಯ ವಿಠ್ಠಲರೇಯಭಾಸುರ e್ಞÁನ ನಿನ್ನಿಂದವೀವ 3
ಝಂಪಿತಾಳ
ಪಂಚ ದ್ವಾರಗಳಲ್ಲಿ ಪಂಚವ ಪುಷಗಳಿಂದಪಂಚರೂಪನ ಧ್ಯಾನ ಮಾಳ್ಪ ನಿನ್ನಪಂಚಮುಖ ಮೊದಲಾದಮರರೆಲ್ಲರು ನಿ-ಶ್ಚಂಚಲದಿ ಭಜಿಸುತಿರೆ ಅವರವರವಾಂಛಿತಗಳನಿತ್ತು ಪರಮ ಮುಖ್ಯ ಪ್ರಾಣ ದ್ವಿ-ಪಂಚಕರಣಕೆ ಮುಖ್ಯ ಮಾನಿ ನೀನೆಪಂಚರೂಪಗಳಿಂದ ಪಂಚಾಗ್ನಿಗತನಾಗಿಪಂಚ ವ್ಯಾಪರಗಳು ಮಾಳ್ಪ ದೇವಪಂಚ ಪರ್ವದಲಿಪ್ಪ ಪಂಚ ಪಂಚಮರರೊಸಂಚರಿಸುವರಯ್ಯಾ ನಿನ್ನಿಂದಲಿಪಂಚಭೇದಗಳರುಹಿ ಶುದ್ಧ ಶಾಸ್ತ್ರಗಳಿಂದ ಪ್ರ-ಪಂಚ ಸಲಹಿದ ವಿಮಲ ಉಪಕಾರಿಯೇ ನಿ-ಷ್ಕಿಂಚನ ಪ್ರೀಯ ಗುರು ವಿಜಯ ವಿಠ್ಠಲರೇಯನಮಿಂಚಿನಂದದಿ ಎನ್ನ ಮನದಿ ನಿಲಿಸೊ 4
ತ್ರಿವಿಡಿತಾಳ
ದಳ ಅಷ್ಟವುಳ್ಳ ರಕ್ತಾಂಬುಜದ ಮಧ್ಯಪೊಳೆವ ಕರ್ಣಿಕೆಯಲ್ಲಿ ಶೋಭಿಸುವಮೂಲೇಶನ ಪಾದ ಪಂಕಜದಲಿ ನಿಂದುಸಲೆ ಭಕುತಿಯಿಂದ ಭಜಿಸುವ ನಿನ್ನ ಚರಣಮೂಲದಲ್ಲಿ ಜೀವ ಆಶ್ರೈಸಿ ಇಪ್ಪನಾಗಿಸ್ಥಳವ ಸೇರಿಪ ಭಾರ ನಿನ್ನದಯ್ಯಾಒಲ್ಲೆನೆಂದರೆ ಬಿಡದು ಭಕತರ ಅಭಿಮಾನ ಒಲಿದು ಪಾಲಿಸಬೇಕು ಘನ ಮಹಿಮಾಖಳ ದರ್ಪ ಭಂಜನ ಗುರು ವಿಜಯ ವಿಠ್ಠಲರೇಯಒಲಿವ ನಿಮ್ಮಯ ಕೃಪೆಗೆ ವಿಮಲ ಚರಿತ 5
ಅಟ್ಟತಾಳ
ಜಾಗೃತಿ ಸ್ವಪ್ನ ಸುಷುಪ್ತಿಯಲ್ಲಿ ನೀನೆಜಾಗರೂಕನಾಗಿ ಜೀವನ ಪಾಲಿಸಿಭಾಗತ್ರಯದಲ್ಲಿ ವಿಭಾಗ ಮಾಡುವಿನಾಗಭೂಷಣಾದಿ ಸುರರಿಗೆ ಜೀವನಸಾಗರ ಮೊದಲಾದ ಸಕಲರಲ್ಲಿ ವ್ಯಾಪ್ತನಾಗರಾಜನ ಅಂಗುಟದಿ ಮೀಟಿದ ಶಕ್ತಯುಗಾದಿ ಕೃತು ನಾಮ ಗುರು ವಿಜಯ ವಿಠ್ಠಲರೇಯನಯೋಗವ ಪಾಲಿಸಿ ಭವದೂರೂ ಮಾಡೋದು 6
ಆದಿತಾಳ
ಅಸುರರ ಪುಣ್ಯವನ್ನು ಭಕ್ತರಿಗಿತ್ತವರಅಸಮೀಚೀನ ಕರ್ಮ ದನುಜರಿಗುಣಿಸುವಿಈಶನೆ ಗತಿಯೆಂದು ನೆರೆ ನಂಬಿದವರಿಗೆಸು ಸಮೀಚೀನವಾದ ಮೋದಗಳೀವಿ ನಿತ್ಯವಸುಧೆಯ ಭಾರವನ್ನು ಧರಿಸಿ ತ್ರಿಕೋಟಿಯಸುಶರೀರಗಳಿಂದ ಬಹಿರಾವರಣದಲ್ಲಿವಾಸವಾಗಿ ಸಕಲ ಭೂತ ಹೃತ್ಕಮಲದಲ್ಲಿ ನಿಂದುಬಿಸಜಜಾಂಡವನ್ನು ಪೊರೆವ ಕರುಣಿ ನೀನುಅಸಮನೆನಿಪ ಗುರು ವಿಜಯ ವಿಠ್ಠಲರೇಯವಶವಾಗುವನು ನಿನ್ನ ಕರುಣದಿ ಆವಕಾಲಾ 7
ಜತೆ
ಹರಿಯ ವಿಹಾರಕ್ಕೆ ಆವಾಸನೆನಿಸುವಿಗುರು ವಿಜಯ ವಿಠ್ಠಲನ್ನ ಸುಪ್ರೀತ ಘನದೂತ ||

No comments:

Post a Comment