Saturday, 29 February 2020

ಅಡಗಿದೇತಕೊ ರಜತ ಕವಚದೊಳಗೆ


ಅಡಗಿದೇತಕೊ ರಜತ ಕವಚದೊಳಗೆ
ಅಡಿ ಭಕ್ತರಾಡುವೋ ಬಿಡಿ ನುಡಿಗೆ ಪ.
ಗೇಣು ಪ್ರಮಾಣದಾ ಪ್ರಾಣರಾಯನೆ ಛಿದ್ರ
ಕಾಣುತಿರೆ ಶಿಲೆರೂಪದಲ್ಲಿ ನಲಿದು
ಆನಂದದಿಂ ನುಡಿದ ಆನತರ ವಚನಕ್ಕೆ
ನೀ ನಾಚಿ ಜಗಕಿನ್ನು ಕಾಣಬಾರದು ಎಂದು 1
ದುರುಳ ಸೀತೆಯ ಕದ್ದು ತೆರಳುತಿರೆ ನಿಮ್ಮ ಕಂ
ಡರವಿಂದನಯನೆ ಆಭರಣ ಕಟ್ಟೊಗೆಯೇ
ಸಿರಿಚರಣ ಸ್ಪರ್ಶವೆನಗಿರಲೆಂದು ಪೈಜಣವ
ಮುರಿಸಿ ಕವಚವ ಮಾಡಿ ಮೆರೆವ ವೈಖರಿಯೇ 2
ರಜತಗಿರಿ ವಾಸ ರಣದಲ್ಲಿ ಬ್ರಹ್ಮಾಸ್ತ್ರವನು
ಭುಜಬಲದಿ ಬಿಡಲು ಲೆಕ್ಕಿಸದೆ ಮೂದಲಿಸೀ
ನಿಜವಾಸ ಸ್ಥಳವಿಲ್ಲದಲೆಯಲೆಂದೆನ್ನುತಲಿ
ರಜತಗಿರಿ ಕವಚ ಮಾಡಿರುವ ವೈಭವವೋ 3
ಕುನ್ನಿ ಮತಗಳ ಮುರಿದು ಘನ್ನ ಶಾಸ್ತ್ರವನೊರೆದು
ಚನ್ನಕೃಷ್ಣನ ರಜತ ಪೀಠದಲಿ ನಿಲಿಸೀ
ಎನ್ನೊಡೆಯನಾಸನವು ಎನಗೆ ಭೂಷಣವೆಂದು
ಚನ್ನಾಗಿ ಮೈಗೆ ಸುತ್ತಿರುವ ವಿಸ್ಮøತಿಯೋ 4
ನಿನ್ನಲ್ಲಿ ವಡಕಿರಲು ಪೂಜಿಸುವ e್ಞÁನಿಗಳಿ
ಗಿನ್ನೊಂದು ನುಡಿ ಅಜ್ಞರಿಂ ಬೇಡವೆಂದೂ
ಚನ್ನಾಗಿ ಹಿಂದೆ ಮುಂದೆಡಬಲದಿ ಮೇಲ್ ಕೆಳಗೆ
ಇನ್ನು ತೋರದ ತೆರದಿ ಮರೆಮಾಡಿಕೊಂಡೂ5
ವಡೆಯ ಈರೇಳು ಲೋಕದಿ ವ್ಯಾಪ್ತನಾಗಿ ನೀ
ನುಡಿದು ಶ್ರೀಮಂತ್ರ ಜೀವರ ಕಾಯೊ ಎನಲೂ
ವಡೆಯಗುತ್ತರ ಪೇಳಲಾರದಲೆ ಬ್ಯಾಸತ್ತು
ಅಡಿಗಿಲ್ಲಿ ಮೈದೋರದಿರುವ ಪರಿ ಏನೋ 6
ಕಂಡವರು ಬಿಡುವರೇ ಆಡದಲೆ ನಿನ ಚರಿತೆ
ಚಂಡ ವಿಕ್ರಮನಹುದೊ ಮುನಿಯದಲೆ ಸಲಹೋ
ಪಾಂಡವರ ಪಾಲ ಗೋಪಾಲಕೃಷ್ಣವಿಠ್ಠಲನತೊಂಡ ಶ್ರೀ ಪ್ರದ್ಯುಮ್ನತೀರ್ಥ ಕರ ಪೂಜ್ಯ 7


No comments:

Post a Comment