Wednesday, 1 January 2020

ಶ್ರೀ ಹರಿಪ್ರಿಯ ಸಖನು shri haripriya sakhanu



ಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪ
ಘೋರ ದಾರಿದ್ಯ್ರದ ಬಾಧೆಯೊಳಿರುತಲಿಚಾರು ಸಚ್ಚರಿತೆಯ ಆಗರವಾಗಿಹ ಅ.ಪ.
ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1
ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆ ಘನ ದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2
ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3
ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯ ಪಾದ ದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4
ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5
ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದ ಸಖ ತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6
ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾ
ಕರ ಪಿಡಿದವನ ಕರೆತಂದನರಮನೆಗೆ ತಾವರ ಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7
ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8
ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9
ಅಂದಿನಿರುಳು ಕಳೆಯೇತಂದಿಹುದೇನು ಕಾಣಿಕೆ ತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10
ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11
ಮಂಗಲಂ ಮಚ್ಛ ಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂ ಸಿರಿ ಕೃಷ್ಣ ಬೌದ್ಧ ಸುಕಲ್ಕಿಗೆ 12
ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜ ಪಿತ ತಂದೆ ಸಿರಿ ವಿಠಲ ಸ್ವಾಮಿ 13
ಶ್ರೀಹರಿಪ್ರಿಯ ಸಖನು ಕುಚೇಲನುವರ ವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿ ಸಂಪದ ಸಿರಿ ಭೋಗಿಸುತಿದ್ದನು 14
ಶ್ರೀ ಸುಧಾಮ ಚರಿತ್ರ ಸಂಪೂರ್ಣಂ


No comments:

Post a Comment