Wednesday, 15 January 2020

ದಾಸರ ನಿಂದಿಸಬೇಡಲೊ ಪ್ರಾಣಿ raastra nindisabedalo praani


ದಾಸರ ನಿಂದಿಸಬೇಡಲೊ ಪ್ರಾಣಿ - ಹರಿ ದಾಸರ ನಿಂದಿಸಬೇಡ ಪ.
ಮೋಸವಾಯಿತೊ ಮನದೊಳು ಗಾಢ | ಲೇಸಾಗಿ ಇದ ತಿಳಕೊ ಮೂಢ ಅಪ
ರಾಮನ ನಿಂದಿಸಿ ರಾವಣ ಕೆಟ್ಟ | ತಮ್ಮಗಾಯಿತು ಸ್ಥಿರಪಟ್ಟ ||
ತಾಮಸದಿಂದಲಿ ಕೌರವ ಕೆಟ್ಟ | ಧರ್ಮಗೆ ರಾಜ್ಯವ ಬಿಟ್ಟ 1
ಮನದೊಳಗಿನ ವಿಷಯದ ವಿಷ ಬಿಟ್ಟು | ಅನುದಿನ ಹರಿಯ ನೆನೆಯಿರಣ್ಣ ||
ಸನಕಾದಿವಂದ್ಯನ ಪೂಜಿಸಿದರೆ ನೀವ್ | ಘನ ಪದವಿಯ ಕಾಣುವಿರಣ್ಣ 2
ಕನಕದಾಸನು ಕಬ್ಬಲಿಗನು ಎಂದು | ಅಣಕಿಸಿ ನುಡಿಬೇಡಿರಣ್ಣ |
ಜನರಂತೆ ನರನಲ್ಲ ತುಂಬುರನೀತನು | ಜನಕಜೆರಮಣನ ಪಾದಸೇವಕನು 3
ಉಡಿಯ ಒಳಗೆ ಕಿಡಿ ಬಿದ್ದರೆ ಅದು ತಾ | ಸುಡದನಕಾ ಬಿಡದಣ್ಣ ||
ಬಡವನಾಗಿ ಕೆಡುಬುದ್ದಿಯ ಬಿಟ್ಟು | ನಡೆಯ ಕಂಡು ಪಡೆದುಕೊಳ್ಳಣ್ಣ 4
ದೇವಕಿ ಸೆರೆಯನು ಬಿಡಿಸಿದ ದೇವನ | ಸೇವಕರು ನರರೆ ನಿಮಗವರು ||
ಭಾವಜನಯ್ಯನ ಪದವ ನೆನೆದರೆ | ಪಾವನ ಮಾಡುವ ಪುರಂದರವಿಠಲ 5


No comments:

Post a Comment