Saturday, 25 January 2020

ನಾ ಧನ್ಯನಾದೆನಿಂದು ಸತ್ಯ ಬೋಧರಾಯರ ದಿವ್ಯ naa dhanyanadenindu


ನಾ ಧನ್ಯನಾದೆನಿಂದು  ಸತ್ಯ ಬೋಧರಾಯರ ದಿವ್ಯ 
ಪಾದಕಮಲವ ಕಂಡು ಪ
ಹಿಂಗಿದವಖಿಳದೋಷಂಗಳು ಸನ್ಮುನಿಗಳವ
ರಂಘ್ರಿ ಸಂದರುಶನದೀ
ಗಂಗಾದಿತೀರ್ಥ ಭುಜಂಗಾದಿ ಮೊದಲಾದ
ತುಂಗ ತೀರ್ಥಯಾತ್ರೆ ಫಲ ಸಮನಿಸಿತು1
ಆವ ಮುನಿಗಳೋ ಮತ್ತಾವ ದೇವತೆಗಳೋ
ಆವಾವಬಲ್ಲ ಮತ್ತಾವಾಗಲೂ
ಸೇವಿಸುವರ ಕೃಪಾವಲೋಕನದಿಂದ
ಪಾವನ ಮಾಡಲು ಕೋವಿದಾರ್ಯರ ಕಂಡು 2
ಸೀತಾರಮಣ ಜಗನ್ನಾಥ ವಿಠ್ಠಲರೇಯಾ
ಭೂತಳದೊಳಗೀ ಮಹಾತ್ಮರನಾ
ಪ್ರೀತಿಯಂ ಸೃಜಿಸಿದನಾಥ ಜನರನ ಪು
ನೀತರ ಮಾಡಲು ಆತ ತಕ್ಷಣದಿ 3


No comments:

Post a Comment