ಮಂಗಲಾ ಸ್ವಸಿದ್ದ ಸಿದ್ಧಗೆ ಮಂಗಲಾ ಸ್ವಶುದ್ಧ ಶುದ್ಧಗೆ |ಮಂಗಲಾ ಸ್ವಬುದ್ಧ ಬುದ್ಧಗೆ ಸದ್ಗುರೇಂದ್ರನಿಗೆ ಜಯ ಮಂಗಲಾ ಪ
ಆದಿಮಧ್ಯಾವಸಾನವಿಲ್ಲದೆ ನಾದ ಬಿಂದು ಕಳಾ ವಿಹೀನಗೆ |ವೇದ ವೇದಾಂತದ ವಿಚಾರವ ತಿಳಿದ ನಿಶ್ಚಲಗೆ |ಸಾಧು ಸಂತ ಮಹಾನುಭವಿಗಳು ಸಾಧಿಸುವ ವರಬೋಧ ಬೋಧಗೆ | ವಾದ ಮನ ಬುದ್ಧ್ಯಾದಿ ಉದಯಾದಿಕವ ಲಕ್ಷಿಪಗೆ 1
ವಿಶ್ವತೋ ಮುಖ ವಿಶ್ವನೇತ್ರನು ವಿಶ್ವಪಾಣಿ ಪಾದ ಶೀರಿಷ | ವಿಶ್ವದೊಳಹೊರಗೇಕ |ಮಯನಾ ಸೂತ್ರನು ಮಣಿಯಂತೆ | ವಿಶ್ವವನ್ನುದ್ಧರಿಸ-ಲೋಸುಗ ವಿಶ್ವದೊಳಗವತರಿಸಿ ಸಾಕ್ಷಾದೀಶ್ವರನು ಕಲಿಯುಗದಿ ವಿಶ್ವಾಮಿತ್ರ ಗೋತ್ರದೊಳು 2
ಪರಮ ಪುರುಷನು ಸ್ವಪ್ರಕಾಶನು ನರಾಕೃತಿಗೆ ತಾ ಬಂದು ಶಿಂಧಾಪುರದಿ ಗುರುನಾಥನು-ದರದಿ ಕರಣಿಕನ್ವಯದಿ | ಸರಸ ಲೀಲಾ ನಟನೆನಟಿಸುತ ತೆರಳಿ ಭ್ರಮರಾಪುರಕೆ ಸದ್ಗುರು ವರ ಕೃಪೆಯತಾ ಪಡೆದು ಜಗದೊಳು ಖ್ಯಾತಿ ಪಡೆದಂಗೆ 3
ಅಂತು ಇಂತೆನಬಾರದಾ ನಿಶ್ಚಿಂತ ರೂಪನು ಬಳಿಕ | ಸಂತ ಮಹಾಂತನು ಸ್ತುತಿಸಲಾತ್ಮ ಸುಬೋಧ ಬೋಧಿಯಲಿ || ಅಂತರಂಗದ ಭ್ರಮೆಯನಳಿದೇಕಾಂತ ಭಾವಿಕ ಭಕ್ತರಿಗೆ ವಿ- ಶ್ರಾಂತವಾದ ಸ್ವ-ಪದದೊಳುದ್ಧರಿಸಿದಾತಂಗೆ 4 ಸ್ಪರ್ಶ ದರ್ಶನದಿಂದೆ ಝಗ ಝಗ ಧರಿಸುತಲಿ ನಾನಾ ವಿ-ಚಿತ್ರಾಚರಣವನು ಚರಿಸುತ್ತ ಸದ್ಗುರು ರಾಯ ಕಡೆಯಲ್ಲಿ, ಪರಮ ಹಂಸಾಶ್ರಮವ ಕೈಕೊಂಡಿನಿತು ಕೆಲಕಾಲದಲಿ ಶಿಂಧಾಪುರದಿ ಸ್ವ-ಸ್ಥಾನ ದೊಳು ಸಹಜ ಸಮಾಧಿ ಸ್ಥಳದಲ್ಲಿ 5
ಶಾಲಿವಾಹನ ಶಕೆಯ ಶತಕತಿ ಮೇಲೆ ಐವತ್ತಾಗೆ ಮೂರನು | ಕಾಲು ದಕ್ಷಿಣ ಅಯನ ಸಂವತ್ಸರ ವಿರೋಧಿಕೃತು | ಕಾಳ ದ್ವಿತಿಯಾಮಾಸ ಆಶ್ವೀನ ಮೇಲೆ ಶಿವ ಬುಧವಾರಕರ್ಣ ವಿಶಾಲಿ ಗರ್ಜಾ ಭರಣೆ ಪ್ರಥಮ ಪ್ರಹರ ಸಮಯದೊಳು 6
ಆ ಸುದಿನದೊಳಗಾ ಮಹಾ ಸಂತೋಷ ಕಾಲದಿ ಸುರರು ಪೂಮಳೆ ಸೂಸುತಿರೆ ಬ್ರಹ್ಮಾದಿಕರು ಸ್ವಸುಖದಿನಲಿದಾಡಿ | ಏಸು ಕಾಲದ ಸುಕೃತ ಫಲವಿದು ವಸ್ತುಕಣ್ಣಲಿ ಕಂಡೆವೈ ಉಲ್ಲಾಸವೆನುತ ಸಮಸ್ತ ಸುರ ಜಯ ಘೋಷ ಮಾಡುತಲಿ 7
ನಿಜ ಪರಂಧಾಮಕ್ಕೆ ಸದ್ಗುರು ಬಿಜಯ ಮಾಡಿದನೆಂಬ ಮಹಾಶಯ | ಸುಜನರೆಲ್ಲರುಬಲ್ಲರಿದನು ಲೋಕಕಿದು ಸತ್ಯ || ತ್ರಿಜಗವೇಪುಸಿಯೆಂಬ ಮಹಾತ್ಮಗೆ ತ್ಯಜನವೆಲ್ಲಿ ಉದಾರ ಮಹಿಮಗೆ | ನಿಜವು ಜಲ ದೊರೆತಿಲ್ಲ ತೋರಲು ಕರಗಲೆರಡಹುದೇ 8
ನಿರಾಕಾರಾಕಾರ ವ್ಯಕ್ತಿಗೆ ಚರಣ ಒಂದೆ ಭೇದ ಮಿಥ್ಯೆಯು | ಚರಣ ಯುಗಕೆರಡುಂಟೆ ಈ ಪರಿ ಶರೀರ ಶರಣಂಗೆ || ಹಿರಿದ ಕಿರಿದ ದರದರ ಹಂಗನು ಹರಿದು ಬಿಸುಟುವ ಶ್ರೀ ಮಹಾಶಂಕರಾನಂದ ಸರಸ್ವತೀ ಯತಿವರ್ಯ ಗುರುವರಗೆ ಜಯ ಜಯ ಮಂಗಲಾ ಜಯ ಜಯ ಮಂಗಲಾ 9
No comments:
Post a Comment