Wednesday, 8 January 2020

ಲಿಂಗ ಬಂದ ನೋಡೊ linga banda nodu


ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ | ತಿಂಗಳ ಸೂಡಿದ ಕಂಗಳ ಮೂರುಳ್ಳ ಪ
ಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ | ಪರಮ ಪುರುಷ ಪರಾತ್ಪರ ಪರತರ | ಸ್ಥಿರ ಚರವಣು ತೃಣ ಭರಿತ ಸದಾಶಿವ 1
ಗಜ ಚರ್ಮಾಂಬರನೂ ಪುರಹರ ಭುಜಗ ಭೂಷಹರನೂ | ಅಜಸುರ ವಂದಿತ ತ್ರಿಜಗ ವ್ಯಾಪಕ | ಸುಜನರಿಗಿತ್ತ ಸುನಿಜಪದ ಮಹ ಘನ 2
ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ- ಪಾರ ಪರಾತ್ಪರ ಗುರುತರ ಶಂಕರ 3


No comments:

Post a Comment