Thursday, 16 January 2020

ಕಂದನೇಕೆ ಮಲಗನೆ , ಕೇಳೆಲೆ ಸಖಿ kandaneke malagane sakhi

ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ||
ಕಾಯಜಜನಕಗೇನಾಯಿತು ಇವಗೆ
ಯಾವಳ ದೃಷ್ಟಿ ತಾಗಿತೆ ||ಅ||
ಕಂದನೇಕೆ ಕಣ್ಣ ಮುಚ್ಚನೆ
ಇಂದು ನೀರದಡದಲ್ಲಿರುವನೆ , ಏ-
ನೆಂದರು ಮುಖವೆತ್ತಿ ನೋಡನೆ , ಗೋ-
ವಿಂದ ಬಾ ಎಂದರೆ ಬಾಯ ತೆರೆವನೆ ||
ತನಯನಾಗಿ ಧರೆ ಅಳೆದನೆ , ತನ್ನ
ಜನನಿಯ ಕಂಡರೆ ಸೇರನೆ
ಮುನಿಗಳಂತೆ ಮೌನ ಪಿಡಿದನೆ
ಘನ ಗೋವು ಕಾಯ್ವಾಗ ಗಾಳಿ ಸೋಕಿತೇನೆ ||
ಸುಮ್ಮನೇತಕೆ ವ್ರತ ಕೆಡಿಸಿದನೆ
ಹಮ್ಮಿನಿಂದಲಿ ಖಡ್ಗ ಪಿಡಿದನೆ
ಜನ್ಮಜನ್ಮಗಳಲ್ಲಿ ಬಿಡದಲಿರುವ ನೀ ಬಾರೊ
ಬೊಮ್ಮ ಶ್ರೀ ಪುರಂದರವಿಠಲ ||

No comments:

Post a Comment