Thursday, 16 January 2020

ಏನು ಮಾಡಲೊ ಮಗನೆ ಯಾಕೆ enu maadale magane yaake

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ ಏನು ಮಾಡಲೊ ಕೃಷ್ಣಯ್ಯ
ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ
ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ
ಕಟ್ಟೆದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟೆ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ
ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶೀಪುರಂದರವಿಟ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ

No comments:

Post a Comment