Wednesday, 15 January 2020

ಧಾನ್ಯ ದೊರಕಿತು ಎನಗೆ dhanya dorakitu enage


ಧಾನ್ಯ ದೊರಕಿತು ಎನಗೆ ಧನವು ದೊರಕಿತು ಪ
ಓಣಿಯೊಳಗೆ ಹೋದ ಮಾಣಿಕ್ಯದ ಹರಳು ದೊರಕಿತೋ ಅ.ಪ
ಕಟ್ಟಿ ಹಗೆಯ ಹಾಕುವುದಲ್ಲ ಒಟ್ಟಿ ಕೆಸರ ಬಡಿಯುವುದಲ್ಲ ||
ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ 1
ಹರಿದು ಗೊಣಸು ಹಚ್ಚುವುದಲ್ಲ ಮುರಿದು ಸಣ್ಣಗೆ ಮಾಡುವುದಲ್ಲ ||
ಅರಿದು ಇದನು ಪೇಟೆಗೆ ಒಯ್ದರೆ ಕರೆದು ಬೆಲೆಯನು ಕಟ್ಟುವುದಲ್ಲ 2
ಪಾಲು ಪಸುಗೆ ಹಂಚುವುದಲ್ಲ ಮೇಲೆ ಚಾರರು ಒಯ್ಯುವುದಲ್ಲ ||
ಶ್ರೀಲೋಲ ಪುರಂದರ ವಿಠಲನ ಮೂಲನಾಮ ದೊರಕಿತಲ್ಲ3


No comments:

Post a Comment