Wednesday, 15 January 2020

ದಯಮಾಡೋ ದಯಮಾಡೋ daamaad dayaamado


ದಯಮಾಡೋ ದಯಮಾಡೋ ದಯಮಾಡೋ ರಂಗ ಪ
ದಯಮಾಡೋ ನಾ ನಿನ್ನ ದಾಸನೆಂತೆಂದು ಅ.ಪ
ಹಲವು ಕಾಲವು ನಿನ್ನ ಹಂಬಲವೆನಗೆ
ಒಲಿದು ಪಾಲಿಸಬೇಕು ವಾರಿಜನಾಭ 1
ಇಹಪರದಲಿ ನೀನೆ ಇಂದಿರೆರಮಣ
ಭಯವೇಕೋ ನೀನಿರಲು ಭಕ್ತರಭಿಮಾನಿ 2
ಕರಿರಾಜವರದನೆ ಕಂದರ್ಪನಯ್ಯ
ಪುರಂದರವಿಠಲ ಸದ್ಗುಣ ಸಾರ್ವಭೌಮ 3


No comments:

Post a Comment