Wednesday, 8 January 2020

ಬಿಂದು ಮಾಧವ ರಮಾಧವ bindu maadhava ramadhava


ಬಿಂದು ಮಾಧವ ರಮಾಧವ ಪ
ಬಿಂದು ಮಾಧವ ಸುಬಂಧು ದೀನ ಭವ |ಬಂಧತರಣ ಗೋವಿಂದ ಶ್ರೀ ಕೃಷ್ಣ 1
ಮಂದರಾದ್ರಿಧರ ಕುಂದ ರದನ ಮಹಾ |ಸುಂದರ ಸಿರಿ ಹೃನ್ಮಂದಿರ ವಾಸಾ 2
ಕದ್ದಿಕಾರ ಸುರವೃಂದ ಸುಪೂಜಿತ |ಇದ್ದಿ ದೇವ ಕಚವೃಂದ ಸಮೇತಾ 3
ನಂದ ನಂದನ ಸುಸಿಂಧುರ ವರದ ಮು-ಕುಂದ ಗೋಪಿಕಾ ವೃಂದ ವಿಹಾರಾ 4
ಮಲ್ಲಿಖೇಡ ಸ್ಥಳ ಹೊಳೆ ಕಾಗಿಣಿ ಥಡಿಬಳಿಗೆ ರಾಯರು ಕುಳಿತಲ್ಲಿರುವ 5
ಪಂಕಜಾಕ್ಷ ಮೀನಕೇತು ಜನಕ ಗರು-ಡಾಂಕ ಶಶಿ ಧ್ವಜ ಶಂಕರಪ್ರಿಯ ಹರಿ6


No comments:

Post a Comment