Thursday, 16 January 2020

ಆಡ ಹೋದಲ್ಲೆ ಮಕ್ಕಳು aada hodalli makkalu

ಆಡ ಹೋದಲ್ಲೆ ಮಕ್ಕಳು
ಆಡಿಇ ಕೊಂಬುವರು ನೋಡಮ್ಮ ||ಪ||
ನೋಡಿ ನೋಡಿ ಎನ್ನ ಮುಖವ
ನೋಡಿ ಕಣ್ಣು ಮೀಟುವರಮ್ಮ ||ಅ.ಪ||
ದೇವಕಿ ಹೆತ್ತಳಂತೆ ವಸು-
ದೇವನೆಂಬವ ಪಿತನಂತೆ
ಕಾವಲಲ್ಲಿ ಹುಟ್ಟಿದೆನಂತೆ
ಮಾವಗಂಜಿಲ್ಲಿ ತಂದರಂತೆ ||
ವಿಷವು ತುಂಬಿದ ಮೊಲೆಯನುಂಡು
ಅಸುರೆಯ ನಾ ಕೊಂದೆನಂತೆ
ನಿಶಿಚರ ಶಕಟಾಸುರನ
ಶಿಶುಗಾಲಿಲೊರಸಿದೆನಂತೆ ||
ನೀನೆನ್ನ ಹಡೆದಿಲ್ಲವಂತೆ
ನಾ ನಿನ್ನ ಮಗನಲ್ಲವಂತೆ
ಧೇನು ಕಾಯುವರಿಲ್ಲವೆಂದು
ಸಾನುರಾಗದಿ ಸಲಹಿದೆಯಂತೆ ||
ಕಿಚ್ಚ ನಾ ಗಡ ನುಂಗಿದೆನಂತೆ
ವತ್ಸಾಸುರನ ಕೆಡಹಿದೆನಂತೆ
ಕಚ್ಚ ಬಂದ ಕಾಳಿಂಗನ
ಕೊಚ್ಚಲು ಮಡುವ ಧುಮುಕಿದೆನಂತೆ ||
ಹದ್ದು ಎನ್ನ ವಾಹನನಂತೆ
ಹಾವು ಎನ್ನ ಹಾಸಿಗೆಯಂತೆ
ಕದ್ದು ಬೆಣ್ಣೆಯ ನಾ ತಿಂದೆನಂತೆ
ಮುದ್ದು ಪುರಂದರ ವಿಠಲನಂತೆ ||

No comments:

Post a Comment