Tuesday, 10 December 2019

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ yativara nimmanu stutipa janara

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ||
ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ ಹರಡಿದ ||
ಜಯ ಮುನಿಗಳವರ ಗ್ರಂಥಗಳಿಗೆ
ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್
ಮಯ ರಾಮರ ಸೇವೆಯ ಸಂತಸದಲಿ
ಗೈದು ಸುಮಂತ್ರಾಲಯದಲಿ ನೆಲೆಸಿದ ||
ಮಂಗಳಕರವಾದ ತುಂಗಾನದಿಯ
ತರಂಗಗಳಲಿ ಮಿಂದು ನಿಮ್ಮನು
ನಿಸ್ಸಂಗರಾದ ಸಾಧು ಸಂಘವ ಪೊರೆಯುವ ||
ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ
ಸುರತರುವಂತೆ ಪ್ರಸನ್ನರಾಗುವಂಥ ||

No comments:

Post a Comment