ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ - |
ದೊರೆ ಮಾಧವನ ಭಜಿಸಿರೈ 3
ಆ ಮಾಘಮಾಸದತಿಶಯವಾದ ಸ್ನಾನವನು |
ಈ ಮಹಾನದಿಯೊಳಗೆ ಮಾಡಲೋಸುಗ ಬೊಮ್ಮ |
ಸೋಮಶೇಖರ ಮುಖ್ಯ ದೇವತೆಗಳೈತಹರು |
ಪ್ರೇಮದಿಂದಲಿ ನಿರುತ ||
ನೇಮವಿದು ದ್ವಿಜಕುಲೋತ್ತಮರಾದವರು ಕೇಳಿ |
ಕಾಮ - ಕ್ರೋದವ ಜರಿದ ಪ್ರಾಯಾಗ ಕ್ಷೇತ್ರದಲಿ |
ರಾಮಣೀಯಕ ಸ್ನಾನನುಷ್ಠಾನ ತೀರ್ಥವಿಧಿ |
ಹೋಮಗಳ ಮಾಡಿರಯ್ಯ 4
ಆರ್ಯವರ್ತದ ಬ್ರಹ್ಮವರ್ತ ದೇಶದ ಮಧ್ಯೆ |
ಧಾರ್ಯವಾದಲೆ ಪುಣ್ಯವಾರಾಣಾಸೀ ಕ್ಷೇತ್ರ |
ಕಾರ್ಯವಿಶ್ವೇಶತಾರಕ ಮಂತ್ರವುಪದೇಶಿ |
ಸೂರ್ಯಚಂದ್ರಾಗ್ನಿನಯನ||
ತ್ವರ್ಯುಗ್ರನೆನಿಪ ಭೂತೇಶ ಭೈರವನಲ್ಲಿ |
ವೀರ್ಯದಿಂದಘಾಕಾರಿ ಜೀವಿಗಳ ಶಿಕ್ಷಿಸುವ |
ಶೌರ್ಯ ಅಗಣಿತ ಮಹಿಮ ಶ್ರೀ ಬಿಂದು ಮಾಧವಗೆ |
ಕಾರ್ಯದೊರೆತನವು ಅಲ್ಲಿ 5
ಅರ್ತಿಯಲಿ ಪಂಚಗಂಗೆಯಲಿ ಮಜ್ಜನಮಾಡಿ |
ನಿತ್ಯ ನೈಮಿತ್ತ್ಯ ಕರ್ಮಂಗಳನು ಪತಿಕರಿಸಿ |
ಸುತ್ತಿ ಅಂತರ್ವೇದಿಯನ್ನು ಪಂಚಕ್ರೋಶ - |
ಯಾತ್ರೆಗಳ ಮಾಡಿ ಬಳಿಕ ||
ಮತ್ತೆ ಶ್ರೀ ವಿಶ್ವೇಶ್ವರಗೆ ಪ್ರದಕ್ಷಿಣೆ ಮಾಡಿ |
ಭಕ್ತಿಪೂರ್ವಕವಾಗಿ ಅಲ್ಲಲ್ಲಿ ಇಹ ವೈಷ್ಣ - |
ವೋತ್ತಮರಿಗೆರಗಿ ಸದ್ಧರ್ಮಗಳ ಮಾಡಿ -
ಕೃತ ಕೃತ್ಯರೆಂದೆನಿಸಿದರಯ್ಯ 6
No comments:
Post a Comment