ವಂದಿಸಿದವರೆ ಧನ್ಯರು - ನಮ್ಮ - |
ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.
ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |
ಒಂದೊಂದು ನಾಮವ ನೆನೆಯುತಲಿ ||
ಮಂದರೋದ್ಧರನನು ಕುಂದದೆ ಪೂಜಿಸಿ |
ವಂದಿಸುವಾನಂದದಿಂದ 1
ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |
ವಿಟ್ಠಲ ವಿಟ್ಠಲ ಎನುತ ಮನ - ||
ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ |
ಅಷ್ಟಾಂಗದಲಿ ವಂದನೆಯ ಮಾಡುತಲಿ 2
ಸಿರಿಲಕ್ಷ್ಮೀಪತಿ ಶರಣಾಗತರನು |
ಕರುಣಿಸೆಂದೆನುತ ಕರವ ಮುಗಿದು ||
ಹರುಷ ಪುಳಕದಿಂದ ಹೊರತ ದೇಹವನು ಶ್ರೀ - |
ಪುರಂದರವಿಠಲರಾಯನ ಚರಣಕೆ 3
No comments:
Post a Comment