Thursday, 26 December 2019

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ tiliyado ninnata tirupati venkata

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ಪ
ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ ಅ .ಪ.
ಆರು ಬಲ್ಲರು ನಿಮ್ಮ - ಶ್ರೀ ಲಕುಮಿ ಮನಸಿಗೆತೋರುದಿಹ ಪರಬೊಮ್ಮ _ ಉಳಿದವರು ಬಲ್ಲರೆನೀರಜಾಸನ ಬೊಮ್ಮ _ ಇದು ನಿನ್ನ ಮರ್ಮ ||ನೀರೊಳಗೆ ಮನೆ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ 1
ಸಕಲ ಮಾಯವಿದೇನು _ ವೃಕನ ವಾಯುಸಖನ ಸಲಹಿದೆ ನೀನು _ ಭಕುತಿಯಿಂದಲಿತುತಿಪರಿಗೆ ಸುರಧೇನು _ ಸುರ ಕಾಮಧೇನು ||ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ |ಯುಕುತಿಯಲಿ ನೆಲನಳೆದ ಭಾರ್ಗವಮುಕುತಿಗೋಸುಗ ಫಲವ ಸವಿದನೆ ||ರುಕುಮನನುಜೆಯ ರಮಣ ಬೌದ್ಧನೆಲಕುಮಿ ರಮಣನೆ ಕಲ್ಕಿರೂಪಿಯೆ 2
ನಿನ್ನ ರೂಪಿನ ಲೀಲಾ - ನೋಡುವ ಜನಕೆಕಣ್ಣು ಸಾಸಿರವಿಲ್ಲಾ _ ನಾ ಪಾಡಿ ಪೊಗಳಲುಪನ್ನಗಾಧಿಪನಲ್ಲ _ ನೀನರಿಯದಿಲ್ಲ ||ಕಣ್ಣು ಮುಚ್ಚದೆ ಬೆನ್ನು ತೋರಿದಿಮಣ್ಣು ಕೆದರುವೆ ಚಿಣ್ಣಗೊಲಿದನೆ |ಸಣ್ಣ ವಾಮನ ಅಣ್ಣ ರಾಮನೆ ||ಪುಣ್ಯ ಪುರುಷನೆ ಬನ್ನ ಬಡುಕನೆ ||ಹೆಣ್ಣುಗಳ ವ್ರತ ಕೆಡಿಸಿ ತೇಜಿಯಬೆನ್ನನೇರಿದ ವ್ಯಾಸ ವಿಠ್ಠಲ* 3

No comments:

Post a Comment