Wednesday, 11 December 2019

ಸುವ್ವಿ ಸಾಧ್ವಿಯರು, ರಾಘವೇ೦ದ್ರರ ಪಾಡಿ suvvi saadhviyaru raghavendrara paadi

ಸುವ್ವಿ ಸಾಧ್ವಿಯರು, ರಾಘವೇ೦ದ್ರರ ಪಾಡಿ
ಸುವ್ವಿ ಸುವ್ವಾಲೆ – ಸುವ್ವಿ ಸುವ್ವಾಲೆ                                     || ಪ ||
ಅ೦ದಿನ ಕಾಲದ ಮಧ್ವಶಾಸ್ತ್ರವ ಮನಕೆ ತ೦ದು
ಅ೦ದದಿ ಟಿಪ್ಪಣಿ ಮಾಡಿದ ದೇವರಾರು – ಸುವ್ವೀ ಸುವ್ವಾಲೆ
ಅ೦ದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ
ಚ೦ದಿರವದನೆ ಈತ ನಮ್ಮ ಗುರುವು – ಸುವ್ವೀ ಸುವ್ವಾಲೆ        || ೧ ||
ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ
ಕಿವಿಗೊಟ್ಟು ಕೇಳುವುದು ಬುಧಜನರು – ಸುವ್ವೀ ಸುವ್ವಾಲೆ
ಪವನಾವೇಶರಿವರು ಕವಲಿಲ್ಲ ಖ್ಯಾತರಾಗಿ
ಅವನಿಯಸುರರಿ೦ದರ್ಚನೆಗೊಬುವರು – ಸುವ್ವೀ ಸುವ್ವಾಲೆ          || ೨ ||
ಅಷ್ಟಾಕ್ಷರ ಮ೦ತ್ರವನ್ನು ತಪ್ಪದಲೆ ನಿತ್ಯವಾಗಿ
ನಿಷ್ಠೆಯಿ೦ದ ಜಪಿಸಲು ಭೂತಭಯವು – ಸುವ್ವೀ ಸುವ್ವಾಲೆ
ಕುಷ್ಠರೋಗಕ್ಷಯ ಪಾ೦ಡುಜ್ವರ ಸನ್ನಿ ಮೊದಲಾದ
ಅಷ್ಟುಪದ್ರವಾಕ್ಷಣ ಬಿಟ್ಟು ಪೋಗುವವು – ಸುವ್ವೀ ಸುವ್ವಾಲೆ       || ೩ ||
ಮೃತ್ತಿಕೆ ಮೂಲೆ ಅ೦ಗಾರ ದಿವ್ಯಮ೦ತ್ರಾಕ್ಷತೆಯು
ಹತ್ತಿರಲಿರಲು ಕ್ಲೇಶವ ಲೇಶಾ ಕಾಣರು – ಸುವ್ವೀ ಸುವ್ವಾಲೆ
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು
ತತ್ತಲಿಲ್ಲ ಶತಸಿಧ್ಧ ಮತ್ತೇನು ಕೇಳಿ –  ಸುವ್ವೀ ಸುವ್ವಾಲೆ              || ೪ ||
ಪ೦ಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ
ಹಿ೦ಡುಗಳು ತೃಷೆಯಿ೦ದ ಬಳಲುತಿರೆ – ಸುವ್ವೀ ಸುವ್ವಾಲೆ
ದ೦ಡಜಗತಿಗೂರಿ ತೋಯ ತೆಗೆಸಿ ಅವನಿ-
ಮ೦ಡಲದೊಳಗೆ ಪೆಸರಾದವರಿವರು – ಸುವ್ವೀ ಸುವ್ವಾಲೆ        || ೫ ||
ಕಟ್ಟಲಿಯ ಭತ್ತದೊಳು ಭೂಪದಳಯುತ್ತ ಬರ-
ಲಿಟ್ಟುಕೊ೦ಡು ಉಣಿಸಿ ಉತ್ತಮ ವರವ – ಸುವ್ವೀ ಸುವ್ವಾಲೆ
ಕೊಟ್ಟು ಕಳಿಸಿದ ಮೇಲೆ ಅವು ಕೊ೦ಚಿಯಾಗಲಿಲ್ಲ
ಗಟ್ಟಿ ಸ೦ಕಲ್ಪರಿವರು ಮುನಿದರು – ಸುವ್ವೀ ಸುವ್ವಾಲೆ                 || ೬ ||
ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ
ಥಟ್ಟನೆ ಕೆಡಿಸಿ ಭೂಪ ಮೆಚ್ಚುವ೦ದದಿ – ಸುವ್ವೀ ಸುವ್ವಾಲೆ
ನೆಪ್ಪು ಧರೆಗಾಗಲೆ೦ದು ಗುರುಸುಧೀ೦ದ್ರಕುಮಾರ
ಸರ್ಪನ ತೋರಿಸಿ ಸುಪ್ರಖ್ಯಾತರಾದರು – ಸುವ್ವೀ ಸುವ್ವಾಲೆ    || ೭ ||
ದ್ವಿಜರಸ್ತೋಮವು ಬಾಯಿ ಬಿಡುತಿರೆ ದಯದಿ೦ದ
ನಿಜಕಾಷ್ಟವಿಳಿಗೆ ನಿಲ್ಲಿಸಿ ಮರವ – ಸುವ್ವೀ ಸುವ್ವಾಲೆ
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ
ಭಜಿಸಿರಿವರನ್ನು ಮಕ್ಕಳು ಬೇಡುವರು – ಸುವ್ವೀ ಸುವ್ವಾಲೆ            || ೮ ||
ಮುತ್ತಿನಮೂಲಿಕೆ ನೃಪಭಕ್ತಿಯಿ೦ದ ಕೂಡಲಾಗಿ
ಸಪ್ತಜಿಹ್ವೆಗುಣಿಸಿದ ಸರ್ವರು ನೋಡೆ – ಸುವ್ವೀ ಸುವ್ವಾಲೆ
ಮತ್ತು ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ
ಮರ್ತ್ಯಪಗೆ ಇತ್ತರು ಮೊದಲ೦ತೆಯೆ ತ೦ದು – ಸುವ್ವೀ ಸುವ್ವಾಲೆ    || ೯ ||
ಹಿ೦ದೆ ಮಾಡಿದ ದುಷ್ಕರ್ಮ ತೀರ ಬ೦ದುದನು ನೋಡಿ
ಒ೦ದಾಕ್ಷಣದಲಿ ಅವನ ವಿಚಾರಿಸಿ – ಸುವ್ವೀ ಸುವ್ವಾಲೆ
ಇ೦ದಿರೇಶನ ಕಾರುಣ್ಯಬಲದಿ೦ದ ಜನನೋಡ
ಸ೦ದೇಹವಿಲ್ಲದೆ ಸುಲೋಕವನಿತ್ತರು – ಸುವ್ವೀ ಸುವ್ವಾಲೆ                 || ೧೦ ||
ತು೦ಗಾತೀರಮ೦ತ್ರಾಲಯದಲ್ಲಿ ಶ್ರಾವಣ ಬಹುಳ
ಮ೦ಗಳ ಬಿದಿಗೆಯಲ್ಲಿ ನಿವಾಸವಾದರು – ಸುವ್ವೀ ಸುವ್ವಾಲೆ
ಶೃ೦ಗಾರ ವೃ೦ದಾವನ ದ್ವಾದಶನಾಮ ಶ್ರೀ ಮುದ್ರೆಯು
ಕ೦ಗಳು ಸಾಲವು ನೋಡೆ ಹೊದ್ದ ಶಾಠಿಯು – ಸುವ್ವೀ ಸುವ್ವಾಲೆ    || ೧೧ ||
ಅ೦ಧಕಬಧಿರ ಕು೦ಟ ನಾನಾರೋಗಿಗಳು ಮತ್ತೆ
ಕ೦ದವರ್ಜ ಮೊದಲಾದವರಿಗೆ ಕಾಮ್ಯ – ಸುವ್ವೀ ಸುವ್ವಾಲೆ
ತ೦ದು ಕೊಡುವರು ಬೇಗ ಇತರ ಸ೦ಶಯವಿಲ್ಲ
ಮ೦ದಭಾಗ್ಯರಿಗೆ ಇವರ ಸೇವೆ ದೊರೆಯದೊ – ಸುವ್ವೀ ಸುವ್ವಾಲೆ        || ೧೨ ||
ಕೌತುಕವೇನೆನ್ನಲಿ ಮು೦ಜಿ ವಿವಾಹ ಮಾಡಿಸುವರು
ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ – ಸುವ್ವೀ ಸುವ್ವಾಲೆ
ಧಾತಾಪಿತನಿಲಯ ವಿದೇನೋಯೆ೦ದು ತೋರುವದು
ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ – ಸುವ್ವೀ ಸುವ್ವಾಲೆ                || ೧೩ ||
ಪಾಡ್ಯ ಪೂರ್ವಾರಾಧನೆ ಆರಾಧನೆ ಉತ್ತರಾರಾಧನೆಗೆ
ಒಡ್ಡಿ ಬರುವುದು ಎ೦ಟುದಿಕ್ಕುಗಳಿ೦ದ ಜನವು – ಸುವ್ವೀ ಸುವ್ವಾಲೆ
ಕಡ್ಡಿ ಹಿಡಿಯದ೦ಥ ಸ೦ದಣಿಯೊಳು ಸನ್ಮುಹೂರ್ತದಿ
ದೊಡ್ಡ ರಥವೇರಿ ಮಠವ ಸುತ್ತುವರು – ಸುವ್ವೀ ಸುವ್ವಾಲೆ                  || ೧೪ ||
ಇಷ್ಟೇ ಎನ್ನಲು ವಶವಲ್ಲ ಮಹಿಮೆಗಳಿನ್ನೂ ಉ೦ಟು
ನಷ್ಟ ಮಾಡುವರು ದುರ್ಮತ ದಾರಿದ್ರ್ಯವ – ಸುವ್ವೀ ಸುವ್ವಾಲೆ
ಸೃಷ್ಟಿಗೊಡೆಯ ಪ್ರಾಣೇಶವಿಠ್ಠಲ ನೆ೦ದು ಪೇಳ್ದರು
ಎಷ್ಟು ಪೇಳಿದರೂ ಎನ್ನಿ೦ದ ತೀರದು ಇವರ ಮಹಿಮೆ – ಸುವ್ವೀ ಸುವ್ವಾಲೆ    || ೧೫ ||

No comments:

Post a Comment