ಸುರಪನಾಲಯದಂತೆ ಮಂತ್ರಾಲಯ||pa||
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ||a.pa||
ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ
ಭೌಮ ಸುಧೀಯೀಂದ್ರಸುತ ರಾಘವೇಂದ್ರ
ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ ||1||
ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ
ತರ ಮನೋರಥಗಳನು ಪೂರೈಸುವಾ
ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ ||2||
ವಾರಾಹಿ ಎಂಬ ನಂದನ ವನದಿ ಜನರತಿ ವಿ
ಹಾರ ಮಾಳ್ಪರು ಸ್ನಾನಪಾನದಿಂದಾ
ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ
ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು |\3||
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ||a.pa||
ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ
ಭೌಮ ಸುಧೀಯೀಂದ್ರಸುತ ರಾಘವೇಂದ್ರ
ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ ||1||
ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ
ತರ ಮನೋರಥಗಳನು ಪೂರೈಸುವಾ
ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ ||2||
ವಾರಾಹಿ ಎಂಬ ನಂದನ ವನದಿ ಜನರತಿ ವಿ
ಹಾರ ಮಾಳ್ಪರು ಸ್ನಾನಪಾನದಿಂದಾ
ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ
ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು |\3||
No comments:
Post a Comment