Sunday, 8 December 2019

ಶುಭದ ಸುಂದರಕಾಯಾ shubhada sundarakaya

ಶುಭದ ಸುಂದರಕಾಯಾ ವಿಬುಧ ಸನ್ಮುನಿಗೇಯಾ
ಅಬುಜ ಜಾಂಡೋದರ ನಿರ್ವಿಕಾರ
ತ್ರಿಭುವನಾತ್ಮ ಭಾವನ ತ್ರಿಗುಣಾತೀತ ನಿತ್ಯದು
ರ್ಲಭ ದುರ್ವಿಭಾವ್ಯ ದೂರೀಕೃತ ದುರಿತ
ನಭಗವರ ವಾಹನ ನಳಿನ ಲೋಚನ ಚನ್ನ
ಇಭರಾಜವರದ ಇಂದಿರೆ ಅರಸ
ಉಭಯ ಸ್ಥಾನದಿ ವ್ಯಾಪ್ತ ತತ್ತದ್ದೋಷ ನಿರ್ಲಿಪ್ತ
ಸಭೆಯೊಳು ದೌಪದಿಯ ಕಾಯ್ದ ಕರುಣಿ
ನಿಬಿಡ ಪಂಕದಿ ಶಿಗಬಿದ್ದು ಬನ್ನಬಡುವ
ಅಬಲರ ಉದ್ಧರಿಸೊ ಅಬುಧಿ ಶಯನ
ಸುಭುಜನಾಮಕ ಜಗನ್ನಾಥ ವಿಠ್ಠಲ ನಿನ
ಗಭಿವಂದಿಸುವೆ ಎನಗೆ ಅಭಯವಿತ್ತು ಸಲಹೊ 1
ಮಟ್ಟತಾಳ
ಪ್ರತಿ ಪ್ರತಿ ಕಲ್ಪಸ್ಥ ಪ್ರತಿ ಪ್ರತಿ ಜೀವರಿಗೆ
ಪ್ರತಿ ಪ್ರತಿ ಯುಗಗಳಲ್ಲಿ ಪ್ರತಿ ಪ್ರತಿ ದೇಹಕ್ಕೆ
ಕೃತ ಕರ್ಮಗಳರಿತು ಪಿತ ಜನನಿ ಭ್ರಾತ
ಸತಿಸುತ ಮುಂತಾದ ಇತರ ಜನರೊಳಿದ್ದು
ಗತಿ ತಪ್ಪಲಿಗೊಡದೆ ಒಬ್ಬೊಬ್ಬರೊಳಗೆ
ಹಿತವನೆ ಪುಟ್ಟ್ಟಿಸಿ ಪೋಷ್ಯ ಪೋಷಕನೆನಿಸಿ
ವೃತಜ ಜಾಂಡ ಪೊರೆವೆ ನಿರ್ವಾಜದಿ ನಿರುತ
ಪತಿತ ಪಾವನ ಜಗನ್ನಾಥ ವಿಠ್ಠಲ ನಿನ್ನ
ದ್ಭುತ ಮಹಿಮೆಯ ಶತಮೋದಗೊಶವೇ 2
ತ್ರಿವಿಡಿತಾಳ
ಕಂಥ ಪಟಗಳಿಗೆ ತಂತು ಜೋಡಿಸಿದಂತೆ
ಪಿಂತೆ ಮಾಡಿದ ಕರ್ಮ ತಂತುಗಳಿಂದಲಿ
ಅಂತವಿಲ್ಲದೆ ಜೀವ ತಂತಿಣಿಗಳ ಕಟ್ಟಿ
ಸಂತೆ ನೆರಹಿ ಜನರ ಅಂತರಂಗದಿ ನೆಲೆಸಿ
ಕಾಂತೆಯರೊಡನೆ ರಮಿಸಿ ಸಂತೊಷಗಳನೀವೆ
ಸಂತರಿಗೆ ಸರ್ವ ಕಾಲದಲಿ
ಎಂತೆಂತು ಸೇವಿಪ ಜಂತುಗಳಿಗೆ ಗತಿ
ಪ್ರಾಂತಕ್ಕೆ ಕೊಡುವೆ ಶ್ರೀಕಾಂತ ನೀನು
ಇಂಥ ವ್ಯಾಪಾರ ನೀ ಮಾಡುತ ಇರಲಾಗಿ
ಚಿಂತೆ ಬಡುವುದ್ಯಾಕೊ ಜೀವರಿಗೆ
ಹೊಂತಕಾರಿ ಜಗನ್ನಾಥ ವಿಠ್ಠಲ ಬ್ರಹ್ಮ
ಕಂತುಹರಾದ್ಯರ ಸ್ವಾಂತಕ್ಕೆ ನಿಲುಕೆ 3
ಅಟ್ಟತಾಳ
ಆರಿಗೆ ಚಿಂತಿಸಲಾರಿಗೋಸುಗ ಪೋಗಿ
ಆರಿಗಾಲ್ಪರಿಯಲಿ ಆರೆನ್ನ ಸಲಹುವ
ರಾರಿವರೆನಗೆ ನಾನಾರು ಜೀವರಿಗೆ ಸ
ರೋರುಹ ಭವನ ಸುಚಾರು ಸೃಷ್ಟಿಯೊಳು
ಭಾರಕ ನಾನೊರ್ವ ಭಾರಕರ್ತನು ನೀನೆ
ಈರೇಳು ಭುವನದ ವ್ಯಾಪಾರ ಮಾಡುವ ಸರ್ವರಾ
ಧಾರ ನೀನಿರೆ ಬಡಿವಾರವ್ಯಾತಕೆ ಎನಗೆ ರ
ಮಾರುಮಣನೆ ಜಗನ್ನಾಥವಿಠ್ಠಲ ಪರಿ
ವಾರ ನಿನ್ನದು ಕಾಯೊ ಕಾರುಣ್ಯನಿಧಿ ಬೇಗ 4
ಆದಿತಾಳ
ಏಸೇಸು ಕಲ್ಪದಲ್ಲಿ ಶ್ರೀ ಸತ್ಯಾದಿ ವೈಕುಂಠ
ಶ್ರೀ ಸತ್ಯಲೋಕ ಆದಿ ಜಗತ್ತು
ಈಶಾವಾಸ್ಯವೆಂದು ಭೂಸುರೋತ್ತಮರು ಪೇಳ್ವ
ರೈಸೇ ಅನ್ಯಥಾ ಉಂಟೆ ವಾಸುದೇವನೆ ಜೀವ
ರಾಸಿಯೊಳು ನೀನಿದ್ದು ದೋಷಫಲಗಳುಣಿಸ
ಲೋಸುಗ ಸ್ಥೂಲದೇಹ ನೀ ಸಂಬಂಧಿಸಿ ಹೃದಯಾ
ಕಾಶದೊಳು ನೀನಿದ್ದು ಕ್ಷೇಶ ಸುಖಗಳೀವೆ
ನೀ ಸ್ವತಂತ್ರನಾಗಿ ಅಜಭವ ಸುರಾದಿಗಳಾ
ಯಾಸವಿಲ್ಲದೆ ಪೊರೆವೆ ಶಾಶ್ವತ ಮೂರುತಿ
ವಾಸವಾನುಜ ಜಗನ್ನಾಥ ವಿಠ್ಠಲ ನಿನ್ನ
ದಾಸನ ಅಪರಾಧ ಲೇಶ ನೋಡದೆ ಕಾಯೊ 5
ಜತೆ
ಅನಂತ ಜೀವರು ನಿನ್ನಾಧೀನರೊ ಶ್ರೀ ಜ
ಗನ್ನಾಥವಿಠ್ಠಲ ಪ್ರಪನ್ನವತ್ಸಲ ನೀನು 6
ತತ್ವ ಸುವಾಲಿಗಳು

No comments:

Post a Comment