Friday, 27 December 2019

ಶ್ರೀಯರಸನೆ ಶೃಂಗಾರ shriyarasane shringara

ಶ್ರೀಯರಸನೆ ಶೃಂಗಾರ ಗುಣಾಂಬುಧಿಮಾಯವರ್ಜಿತ ಮದನಕೋಟಿ ತೇಜತೋಯಜ ನಯನ ಸರ್ವ ಜಗದಂತರ್ಯಾಮಿ ಸುರ-ಗೇಯ e್ಞÁನಾನಂದ ಕಾಯ ಕರುಣಿಹೇಯೋಪಾದೇಯ ರಹಿತ ಹೆಂಗಳ ಮೊರೆಯ ಕೇಳಿಕಾಯಿದ ಮಹಿಮ ಕಂಬು ಚಕ್ರಾಂಕಿತಆಯಾಸ ವರ್ಜಿತ ಅಜಭವಾದಿಗಳಿಗೆಸಾಯುಜ್ಯವಿತ್ತು ಸರ್ವ ಕಾಲದಲ್ಲಿನ್ಯಾಯದಿಂದಲಿ ಸ್ವಸ್ವಾನಂದವನುಣಿಸುತಪ್ರೀಯನೆಂದೆನಿಸುವ ಪ್ರೀತಿವಂತಾಓಯೆಂದು ಕೂಗಿ ನಿನಗೆ ಮಾತುಉಸುರುವೆ ಎಮ್ಮ ಗುರುರಾಯರಂತರಿಯಾಮಿ ರಘುನಂದನಹೇಯ ಕರ್ಮಗಳೆಂಬೊ ಹೆಬ್ಬುಲಿ ಬಲಿಗೆ ಸಿಲುಕಿಬಾಯ ಬಿಡುವೆನೊ ಸ್ವಾಮಿ ಭಕುತರೊಡಿಯಾಈಯವನಿಯೊಳಗೆ ಇದರಿಂದ ಉಳಿವ ಅನ್ಯೋ-ಪಾಯವೆಂಬೋದು ಕಾಣೆ ನಿನ್ನ ವಿನಃತಾಯಿ ತನ್ನ ಶಿಶುವು ತನಗೆ ಹರುಷವೆಂದುವಾಯು ಸಖ ತುಡಿಕೆ ನೋಡುವಳೆನ್ಯಾಯವೆ ಜಗದೊಳಗೆ ಅನಂತತಾಯಿಯಂದದಲಿಪ್ಪ ತಮ ವರ್ಜಿತಾಕಾಯಬೇಕೆನ್ನ ಕರ್ಮ ಕೆಳೆಗ್ಯಾದಿಗೆ ಸಾ-ಹಾಯವಾಗಿಪ್ಪ ಸತತ ನಿರ್ವಿಕಾರಪೇಯಪನನುಜ ನಮ್ಮ ವ್ಯಾಸವಿಠ್ಠಲ ಮುನಿಗೇಯ ಮುಕ್ತಾಶ್ರಯ ಮುಚಕುಂದ ವರದಾ 1
ಧ್ರುವತಾಳ
ಸಾಧನವಾವುದೊ ಸರ್ವ ಕಾಲದಲ್ಲಿಭೂದೇವಿ ರಮಣ ಭೂತಿವಂತ ಕೃಷ್ಣಮೇದಿನಿಯೊಳು ಪುಟ್ಟ ಮಿತಿಯಿಲ್ಲದ ಪಾಪಹಾದಿಯ ಪಿಡಿದು ಕೆಟ್ಟೆ ಹರಿಯೆ ಕೇಳೊಕ್ರೋಧ ಮೋಹ ಲೇಶ ಕೊರತೆ ಎಂಬುದು ಕಾಣೆಪಾದುಕ ಬಿಟ್ಟು ನಡೆದ ಪರಿಯಂತವೊಬಾಧೆ ಬಡುವೆನಯ್ಯ ಭವದೊಳು ಸಿಗಬಿದ್ದುಏ ದಯಾನಿಧಿಯೆ ಯದುಕುಲ ನಂದನಭೂದೇವ ತತಿಗಳಿಗೆ ಭಕುತಿಯಿಂದಲಿ ಅವರಪಾದಕೆ ಎರಗಿ ಪರಿ ಪರಿ ಸ್ತೋತ್ರವಮೋದದಿಂದಲಿ ಮಾಡಿ ಮೋಕ್ಷ ಮಾರ್ಗವ ಬೇಡದಾದೆ ಬಿಂಕವ ತಾಳಿ ಬಿರಿದಾಂಕನೆಸಾಧಿಸಿಕೊಂಡೆ ನಿರಯದಲ್ಲಿ ಕಷ್ಟಪಡುವ ಸಾಧನದ ಬಗೆಯನ್ನು ಸಂತೋಷದಿಆದರದಿಂದಲಿ ಆಪ್ತ ನೀನಾಗಿ ಪೂರ್ಣಬೋಧರ ಮತದಲ್ಲಿ ಪೊಂದಿಸಿರಲುಓದನದ ವಿದ್ಯವನ್ನು ಒಲಿಸುತ್ತ ಎನ್ನೊಳಗೆಕಾದುವೆ ಜನರ ಕೂಡ ಕಠಿಣದಲ್ಲಿಸಾಧು ಜನರ ವಚನ ಸರ್ವದಾ ಕೇಳಿ ಅನುಮೋದನ ಮಾಡದಲೆ ಮದದಿಂದಲಿವೇದ ಶಾಸ್ತ್ರವನೋಡಿ ವೈಜ್ಯದಿಂದಲಿಗಾದಿ ಮಜ್ಜನಗೈದೆ ಗರ್ವದಲ್ಲಿಆದಿ ಮೂರುತಿ ನಮ್ಮ ವ್ಯಾಸವಿಠಲ ಪಂಚಭೇದ ಮಾರ್ಗವ ಕಾಣದಾದೆ ಕರುಣಿ 1
ಮಟ್ಟತಾಳ
ಶಬ್ದಾದಿ ವಿಷಯ ಅಬ್ಧಿಯೊಳಗೆ ಮಹಾಹಬ್ಬಿದ ಕರಣಗಳು ದೊಬ್ಬಿ ದುಃಖ ಬಡುವ ಅಬ್ಬರವೇನೆಂಬೆ ಅನುಪಮ ಚರಿತನೆಹೆಬ್ಬುಲಿ ಎಂತಿಪ್ಪ ಹೆಚ್ಚಿದಹಂಕಾರದುರ್ಭಾಗ್ಯನ ಮಾಡಿ ದುಃಖದೊಳಿಡುವದುಕರ್ಬುರರ ಕಾಟ ಕಡಿಮೆಯೆಂಬುದೆಯಿಲ್ಲಾಅರ್ಬುದ ಜನ್ಮಕ್ಕೆ ಆರನಾ ಕಾಣದಾಅರ್ಭಕ ನಾನಯ್ಯ ಅನಿಮಿತ್ಯ ಬಂಧುಮಬ್ಬು ಕವಿಸದಿರು ಮನಸಿಜನಯ್ಯನೆಶಬ್ದಗೋಚರನೆ ವ್ಯಾಸವಿಠ್ಠಲ ದು-ಗ್ಧಾಬ್ಧಿಜ ಪತಿಯೆ ಪಾಪಭ್ರಾನಿಲನೆ 2
ತ್ರಿವಿಡಿತಾಳ
ದಾಮೋದರನಂತ ದಶರಥನಂದನರಾಮ ರಾಜ ತೇಜ ರಾಜೀವ ನಯನಮಾ ಮನೋಹರ ಮಧುಸೂದನ ನಿಜಭಕ್ತಸ್ತೋಮ ಪಾಲಕ ಪಾರತಂತ್ರ ರಹಿತಾವ್ಯೋಮಕೇಶನೊಡಿಯ ವ್ಯಾಪ್ತ ಮೂರ್ತಿ ಪೂರ್ಣಧಾಮ ಧಾರಕ ದೈತ್ಯ ಕುಲ ನಾಶನಸಾಮಜವರದ ಸಾಕಾರ ಸಾತ್ವಿಕ ಲ-ಲಾಮ ಲಕ್ಷಣವಂತ ಲಕ್ಷೀಕಾಂತಾಕಾಮಿತ ಜನ ಚಿಂತಾಮಣಿ ರಣರಂಗಭೀಮ ಭಯಂಕರ ಭೀತಿರಹಿತಾಭೂಮಿ ಭಾರಕ ದೈತ್ಯಾ ರಾಮ ಕುಠಾರ ಸುಖ ದುಃ-ಖಾಂಬುಧಿ ಸೂರ್ಯ ಕೋಟಿ ಪ್ರಕಾಶನೇಮವಿಲ್ಲದೆ ನಿನ್ನ ನಾಮಗಳನಂತಈ ಮಹಿಯೊಳಗುಂಟು ಈಶನೊಡಿಯಯಾಮ ಯಾಮಕೆ ಎನಗೆ ಎಲ್ಲಿದ್ದ ಕಾಲಕ್ಕುಸ್ವಾಮಿ ಪಾಲಿಸಬೇಕು ಜಿಹ್ವಾಗ್ರದಿಈ ಮಹಾ ಕಲಿಯುಗದೊಳಗಿಂಬಾವದು ಪಾಪಸ್ತೋಮ ಬತ್ತಿಸಿ ಮುಂದೆ ಗತಿ ಮಾರ್ಗಕ್ಕೆಶಾಮಸುಂದರ ಕಾಯಾ ವ್ಯಾಸವಿಠಲ ಕಾಯೊಪಾಮರ ಮನುಜನ್ನ ಪತಿತ ಪಾವನನೆ 3
ಅಟ್ಟತಾಳ
ಶತಕಲ್ಪವಾದರು ಇತರಾಲೋಚನೆಯಿಲ್ಲಾಮತಿಹೀನ ಜನರಿಗೆ ಯತನದಿಂದಲಿ ನೋಡೆಕ್ಷಿತಿ ಸುರ ಜನ್ಮ ವಿಹಿತವಾಗಿ ಬಂದರುಶ್ರುತಿ ಪುರಾಣಗಳಲ್ಲಿ ಚತುರನಾಗಿದ್ದರುಕ್ರತು ಮೊದಲಾದದ್ದು ವ್ರತಗಳಾಚರಿಸಲುಮತಿವಂತ ಜನರಿಗೆ ನತನಾಗಿ ಇದ್ದರುರತುನಾದಿ ಧನಗಳು ಮಿತಿಯಿಲ್ಲದಿತ್ತರುಸ್ವತಯೇವ ನಿತ್ಯ ಸದ್ಗತಿಗೆ ಕಾರಣನಲ್ಲಶತಧೃತಿ ಪಿತ ನಿನ್ನ ಹಿತವಾದ ನಾಮ ಸಂ-ಗತಿಯಾಗದಲೆ ಸಮ್ಮತವಾಗದೆಂದಿಗುಯತಿಗಳಾದರು ಮತಿಗೆ ತೋರುವದಿದೆಚ್ಯುತ ವಿದೂರನೆ ನಮ್ಮ ವ್ಯಾಸವಿಠಲ ನಿನ್ನಮತವಿದೆ ಮತವಿದೆ ರತಿಪತಿ ಜನಕಾ 4
ಆದಿತಾಳ
ಎನ್ನ ಯೋಗ್ಯತಾ ಗುರುಗಳಲ್ಲಿ ನೆಲಸಿಪ್ಪ ಸಂ-ಪನ್ನ ಮೂರುತಿಯೆ ಸರ್ವ ಜಗದಂತರ್ಯಾಮಿನಿನ್ನ ಪಾದವೆ ಗತಿ ನಿಖಿಳ ಬಗೆಯಿಂದಅನ್ಯರೊಬ್ಬರ ಕಾಣೆ ಆವಲ್ಲಿ ನೋಡಿದರು ಎನ್ನ ಪಾಲಿಸುವರ ಯದು ಕುಲೋತ್ತಮ ಕೃಷ್ಣಅನ್ಯಾಯ ನಡತೆಗಳು ಆಚರಿಸಿದೆನಯ್ಯಾಅನ್ನಂತ ಬಗೆಯಿಂದ ಅತಿ ನಿರ್ಭೀತನಾಗಿಎನ್ನಪರಾಧಗಳು ಎಣಿಸಿದರಾಗೆ ಹರಿಯೆಇನ್ನಾವ ಗತಿ ಕಾಣೆ ಇಹಪರದಲ್ಲಿ ಸಿದ್ಧಬನ್ನ ಬಡುವದೆ ಸರಿ ಬಹುಕಾಲ ನರಕದಲ್ಲಿ ಅನಾಥ ಬಂಧುವೆ ಅತಿ ದಯಾಪರ ಮೂರ್ತಿಘನ್ನ ಪತಿತ ಪಾವನ್ನ ಘನ್ನ ಭವಾಂಬುಧಿ ನಾವಇನಿತು ಬಿರಿದು ಉಳ್ಳ ಇಭರಾಜ ವರದನೆನಿನ್ನ ಮೊರೆ ಬಿದ್ದೆ ಎನ್ನ ಮರೆಯದಿರುಅನಾಥ ಬಂಧು ದೇವ ವ್ಯಾಸವಿಠಲರೇಯಾನಿನ್ನ e್ಞÁನವ ಕೊಟ್ಟು ನಿರ್ಭೀತನ ಮಾಡೊ 5
ಜತೆ
ಯೇನಮ್ಮೋಚಯಾಮಿ ಎಂಬೊ ಇಚ್ಛೆಯು ಒಂದೆಕಾಣಿಸುವದು ಸಾಧನ ವ್ಯಾಸವಿಠ್ಠಲ ಎನಗೆ ||

No comments:

Post a Comment