Wednesday, 18 December 2019

ಶೋಭನ ಶೋಭನವೆ ನಮ್ಮ shobhane shobhanave namma

ಶೋಭನ ಶೋಭನವೆ ನಮ್ಮ
ಶ್ರೀ ಭೂದೇವಿಯರ ಅರಸು ವೆಂಕಟಗೆ ಪ.
ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗ
ಇಂದಿರೆ ಹರುಷದಿಂದುದಿಸಿ ಬಂದು ||
ಮಂದಾರ ಮಾಲೆಯ ಹಾಕಿದ ದೇವಗೆ
ಕಂದರ್ಪಕೋಟಿ ಲಾವಣ್ಯ ಮೂರುತಿಗೆ 1
ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದೆ ಬಂದಿರಲಾಗಿ ||
ಸನಕಾದಿವಂದ್ಯನ ಕಂಡು ಸಂತೋಷದಿ
ಜನಕಜೆ ಮಾಲೆಯ ಹಾಕಿದ ರಾಮಗೆ 2
ರುಕುಮನು ಶಿಶುಪಾಲಗೀವೆನೆಂಬ ಮಾತಿಗೆ
ಸಕಲ ರಾಯರು ಬಂದಿರಲಾಗಿ ||
ಭಕುತಿ ವತ್ಸಲನ ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣೆಗೆ 3
ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯು
ಮಿತ್ರವಿಂದಾ ಲಕ್ಷಣಾ ಜಾಂಬವತಿ ||
ಮತ್ತೆ ಸೋಳಾಸಾಸಿರ ಗೋಪಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣಗೆ 4
ಪದ್ಮದೇಶದಲೊಬ್ಬ ದೇವಾಂಗನೆಯು
ಪದ್ಮಮುಖಿಯು ಶ್ರುತಕೀರ್ತಿಯಾಗಿ ||
ಪದ್ಮನಾಭ ಶ್ರೀ ಪುರಂದರವಿಠಲಗೆ
ಪದ್ಮಾವತೀ ಪ್ರಿಯ ಶ್ರೀನಿವಾಸಗೆ 5

No comments:

Post a Comment