Tuesday, 17 December 2019

ರಂಗನೊಲಿದ ನಮ್ಮ rangnolida namma krishna

ರಂಗನೊಲಿದ ನಮ್ಮ ಕೃಷ್ಣನೊಲಿದ |
ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತು ಪ
ಕರಿಯಪುರದ ನಗರದಲ್ಲಿ ಕೌರವರು ಪಾಂಡವರು |
ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||
ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |
ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1
ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |
ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||
ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |
ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2
ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |
ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||
ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |
ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3
ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |
ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||
ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |
ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4
ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |
ಮಾಗಿಯ ಕೋಗಿಲೆಯಂತೆ ಕಾಯ ಒಲೆಯುತ ||
ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |
ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5
ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |
ಕ್ರೂರ ಕೌರವ ದುಃಶಾಸನ ಗುರುಹಿರಿಯರು ||
ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |
ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6
ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |
ಮುಂದರಿಯದೆ ಮುಗುಳುನಗೆಯ ಮಾತನಾಡಿದ ||
ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |
ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು 7
ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿ
ಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||
ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |
ಹಲ್ಲುಕೀಳುವರೈವರು ಬೇಡವೆಂದಳು 8
ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |
ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||
ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |
ರಟ್ಟೆಕೀಳುವರೈವರು ಬೇಡವೆಂದಳು 9
ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |
ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||
ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |
ತೊಡೆಯ ಮೇಲೆ ಒಪ್ಪುವದು ಬೇಡವೆಂದಳು10
ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |
ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||
ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |
ಚುಚ್ಚಿ ಹಾಕುವರೈವರು ಬೇಡವೆಂದಳು 11
ಎಷ್ಟು ಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |
ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||
ಉಟ್ಟ ಸೀರೆ ಸೆಳೆಯಿರಿವಳ ಉಬ್ಬು ಕೊಬ್ಬು ತಗ್ಗಲೆಂದು |
ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ12
ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |
ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||
ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |
ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು13
ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |
ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||
ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |
ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14
ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |
ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||
ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |
ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು15
ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |
ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ ||
ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |
ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು 16
ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |
ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |
ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |
ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು17
ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯ ಕೇಳಿ |
ಅಂದು ಉಟ್ಟ ವಸ್ತ್ರಗಳು ಅಕ್ಷಯ ವೆಂದನು||
ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |
ನೊಂದು ಬೆಂದು ದುಃಶಾಸನು ನಾಚಿಕುಳಿತನು 18
ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |
ಮಾಡಿದರು ಮಾಧವನ ಮುದ್ದು ಸ್ತೋತ್ರವ ||
ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಪಂಥ - |
ವಾಡಿ ತನ್ನ ಪತಿಗಳೈವರನ್ನು ಗೆಲಿದಳು 19
ಕೇಶಮುಡಿಗಳನ್ನ ಕಟ್ಟಿ ಕ್ಯೆಯಕಾಲಮಣ್ಣನೊರಸಿ |
ಸಾಸಿರನಾಮದ ಕೃಷ್ಣನು ಸುರರ ಪಾಲಿಪ |
ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂ
ತೋಷದಿಂದ ದ್ರೌಪದಿಯು ಮನೆಗೆ ಬಂದಳು 20
ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |
ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |
ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |

No comments:

Post a Comment