ರಂಗನ ನೋಡಿರೆ ರಾಯ ಚೆನ್ನಿಗ ನರ-ಸಿಂಗನ ದೇವಕಿದೇವಿಯ ಸುತನ ಪಥಳಿಥಳಿಸುವ ನಗು ಮೊಗದ ಚಿನ್ನಿಗನ |ಪೊಳೆವ ವಜ್ಜರದ ಕಿರೀಟವಿಟ್ಟವನ ||ಪ್ರಳಯ ಕಾಲದಿ ವಟಪತ್ರಶಯನನ |ನಳಿನಭವನ ನಾಭಿಯಲ್ಲಿ ಪೆತ್ತವನ 1
ಆಣಿಮುತ್ತಿನ ದುಂಡು ಮಕರ ಕುಂಡಲನ |ಬಾನುಪ್ರಭೆಯ ಭುಜಕೀರ್ತಿಯೊಪ್ಪುವನ ||ಕಾಣಿಸೆ ಅಪರಂಜಿ ಕಡಗ ಕಂಕಣ ಹೊಸ |ಮಾಣಿಕದುಂಗುರವಿಟ್ಟು ಮೆರೆವನ 2
ಕಮಲಾಮನೋಹರ ಕಮಲಜ ಪಿತನ |ರಮಣಿಗೆ ಪಾರಿಜಾತವನೇ ತಂದವನ ||ಕ್ರಮದಿಂದ ಭಸ್ಮಾಸುರನ ಕೊಂದವನ |ರಮೆಯಾಣ್ಮನೆನ್ನಲು ಇಹಪರವೀವನ 3
ಶುಕ್ರವಾರ ಪುಲಕು ಪೂಜೆಗೊಂಬವನ |ಸಕ್ಕರೆ-ಹಾಲು-ಬೆಣ್ಣೆಯ ಮೆಲ್ಲುವವನ ||ಗಕ್ಕನೆ ಸುರರಿಗೆ ಅಮೃತವಿತ್ತವನ |ರಕ್ಕಸದಲ್ಲಣ ರಾವಣಾಂತಕನ 4
ಪಾಪವಿನಶಾದಿ ಸ್ನಾನವ ಮಾಡಿ |ಪಾಪಗಳೆಲ್ಲ ಬೇಗನೆ ಬಿಟ್ಟು ಓಡಿ ||ಈ ಪರಿಯಿಂದಲಿ ಮೂರುತಿ ನೋಡಿ |ಶ್ರೀಪತಿ ಪುರಂದರವಿಠಲನ ಪಾಡಿ 5
No comments:
Post a Comment