Tuesday, 17 December 2019

ರಾಮ ರಾಮ ರಾಮ ರಾಮ ರಾಮವೆನ್ನಿರೊ rama 3 Ramanenniro

ರಾಮ ರಾಮ ರಾಮ ರಾಮ ರಾಮವೆನ್ನಿರೊ |
ರಾಮ ರಾಮವೆಂಬ ನಾಮ ಮನದಿ ನೆನೆಯಿರೊ ಪ.
ಇಂದ್ರಿಯಂಗಳೆಲ್ಲ ಕೂಡಿ ಬಂದು ತನ್ನ ಮುಸುಕಿದಾಗ |
ಸಿಂಧು ಸುತಾಪತಿಯ ಧ್ಯಾನ ಅಂದಿಗೆ ಒದಗಲೀಯದು 1
ಭರದಿ ಯಮನ ಭಟರು ಬಂದು ಹೊರಡು ಎಂದು ಮುಟ್ಟಲು |
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ದೊರೆಯದಯ್ಯ 2
ಕಾಸಶ್ವಾಸದಲ್ಲಿ ಸಿಲುಕಿ ದೋಷ ಬಲಿದು ಪೋಗುವಾಗ |
ವಾಸುದೇವನೆಂಬ ನಾಮ ವದನದಲ್ಲಿ ಒದಗದಯ್ಯ 3
ಶೃಂಗಾರವಾದ ದೇಹ ತಂಗಿಬಿಟ್ಟು ಪೋಗುವಾಗ |
ಕಂಗಳಿಗಾತ್ಮಾ ಸೇರಿದಾಗ ರಂಗನ ಧ್ಯಾನ ದೊರಕದಯ್ಯ 4
ಕಷ್ಟಜನ್ಮದಲ್ಲಿ ಬಂದು ದುಷ್ಟಕರ್ಮಗಳನು ಮಾಡಿ |
ಬಿಟ್ಟು ಹೋಗುವಾಗ ಪುರಂದರವಿಠಲನ ನೆನೆಮನವೆ 5

No comments:

Post a Comment