Tuesday, 17 December 2019

ರಕ್ಷಿಸೋ ಲೋಕನಾಯಕನೆ rajshisho lokanaayakane

ರಕ್ಷಿಸೋ ಲೋಕನಾಯಕನೆ-ನೀ ಎನ್ನ-
ರಕ್ಷಿಸೋ ಲೋಕನಾಯಕನೇ ಪ
ಎಷ್ಟೆಷ್ಟು ಜನ್ಮ ಕಳೆದೆನೋ ಇ
ನ್ನೆಷ್ಟೆಷ್ಟು ಜನ್ಮ ಪಡೆವೆನೋ ||
ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು
ಇಷ್ಟವ ಪಾಲಿಸು ಇಭರಾಜವರದನೆ 1
ಬಾಲತನದಿ ಬಹು ಬೆಂದೆನೋ ನಾನಾ
ಲೀಲೆಯಿಂದಲಿ ಕಾಲ ಕಳೆದೆನೋ ||
ಲೋಲ ಲೋಚನ ಎನ್ನ ಮೊರೆಯ ಕೇಳುತ ಬೇಗ
ಜಾಲವ ಮಾಡದೆ ಪಾಲಿಸೈ ನರಹರಿ2
ಮುದುಕನಾಗಿ ಚಿಂತೆಪಡುವೆನೋ ನಾ
ಕದಡು ದುಃಖವ ಪಡಲಾರೆನೋ ||
ಸದರವಲ್ಲವು ಶ್ರೀ ಪುರಂದರ ವಿಠಲ
ಮುದದಿಂದ ರಕ್ಷಿಸೊ ಖಗರಾಜಗಮನ 3

No comments:

Post a Comment