Monday, 16 December 2019

ಪಾಡಿದರೆನ್ನೊಡೆಯನ ಪಾಡುವೆನು paadidarennodeyane

ಪಾಡಿದರೆನ್ನೊಡೆಯನ ಪಾಡುವೆನು
ಬೇಡಿದರೆನ್ನೊಡೆಯನ ಬೇಡುವೆನು ಎ-
ನ್ನೊಡಲನು ಒಡೆಯಗೆ ತೋರುವೆನು
ಬಡತನವನು ನಾ ಬಿನ್ನಹ ಮಾಡುವೆ
ಪಾಡಿದರೆನ್ನೊಡೆಯನ ಪಾಡುವೆನು ಎ-
ನ್ನೊಡೆಯ ಅಚಲಾನಂದವಿಠಲ ನಿನ್ನ ಚರಣ
ದೆಡೆಯ ಸಾರಿ ಬದುಕುವೆನನುದಿನ
* ಈ ಉಗಾಭೋಗಗಳು ಪುರಂದರವಿಠಲ ಅಂಕಿತದಲ್ಲೂ ಇವೆ

No comments:

Post a Comment