Tuesday, 10 December 2019

ನೆರೆನಂಬಿ ಪಡೆಯಿರೋ ಸ್ಥಿರವಾದ ಕರುಣವ nerenambi padeyiro sthiravada karunava

ನೆರೆನಂಬಿ ಪಡೆಯಿರೋ  ಸ್ಥಿರವಾದ ಕರುಣವ
ಗುರುರಾಘವೇಂದ್ರರಾಯರ ಚಾರುಚರಣವ            || ಪ ||
ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು
ಶರಣರ ದುರಿತವ ತರಿದು ಕಾಯ್ವನೆಂದು        || ೧ ||
ಕರವ ಮುಗಿದು ಬಂದ ಪರಮ ಪಾಮರರಾ
ಪೊರೆವ ಕರುಣ ಕೃಪಾಕರಯತಿವರರ                || ೨ ||
ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ            || ೩ ||

No comments:

Post a Comment