ನೆರೆ ನಂಬಿದೆ ಮದ್ ಹೃದಯ ಮಂಟಪದೊಳುಪರಿಶೋಭಿಸುತಿರು ಪಾಂಡುರಂಗ ||ಶರಣ ಜನರ ಸಂಸಾರ ಮಹಾಭಯಹರಣ ಕರುಣ ಸಿರಿ ಪಾಂಡುರಂಗ ಪ
ಪರದೇವನೆ ನಿನ್ನ ಲೀಲಾ ಸ್ಮøತಿಯನುನಿರುತ ಎನಗೆ ಕೊಡು ಪಾಂಡುರಂಗ ||ಪರರಾಪೇಕ್ಷೆಯ ಬಿಡಿಸಿ ನಿರಂತರಪರಗತಿ ಪಥ ತೋರೊ ಪಾಂಡುರಂಗ 1
ನೆರದಿಹ ಬಹು ಜನರೊಳಿದ್ದರು ಎನ ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ ||ಪರಿಪರಿ ಕೆಲಸವು ನಿನ್ನ ಮಹಾಪೂಜೆನಿರುತ ಎನಗೆ ಕೊಡು ಪಾಂಡುರಂಗ 2
ಸುಖವಾಗಲಿ ಬಹು ದುಃಖವಾಗಲಿಸಖ ನೀನಾಗಿರು ಪಾಂಡುರಂಗ ||ನಿಖಿಲಾಂತರ್ಗತ ವ್ಯಾಸ ವಿಠಲ ತ್ವ-ನ್ಮುಖ ಪಂಕಜ ತೋರೊ ಪಾಂಡುರಂಗ 3
No comments:
Post a Comment