Friday, 6 December 2019

ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ mangalarutiya belagaire madhusudhanage divya

ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ
ಮಂಗಳಾರತಿಯ ಬೆಳಗೆ |ಪ||
ಮಚ್ಛನಾಗಿ ವೇದವ ತಂದಿಟ್ಟು ಮಂದರ ಕೃಷ್ಣ
ಮಚ್ಛನಾಗಿ ವೇದವ ತಂದಿಟ್ಟು
ಪೊತ್ತು ಬೆನ್ನಿನಿಂದಲಿ ಅಮೃತ ಬೀರಿದಂಥ ಹರಿಗೆ||
ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ
ಸುತ್ತಿ ಒಯ್ದ ಸುರುಳಿ ಭೂಮಿ
ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ ||
ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ
ಕೂಸಿನಂತೆ ಬಂದು ಬೆಳೆದ
ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ ||
ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ
ಕುಂಭಕರ್ಣನಣ್ಣ(ನ)
ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ||
ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇರಿ ಕೃಷ್ಣ
ಬಟ್ಟೆ ತೊರೆದು ಬೌದ್ಧನಾಗಿ
ದುಷ್ಟಕಲಿಯ (ಕೊಂದ) ಭೀಮೇಶಕೃಷ್ಣನಂಗ ಪೂಜಿಸುತಲಿ||

No comments:

Post a Comment