Friday, 6 December 2019

ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ mangaladevi arasanage

ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ
ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ||
ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು
ವಾರಿಜದಳಲೋಚನಗಾರತಿಯನೆತ್ತಿದರೆ ||
ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ
ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ ||
ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ
ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ ||
ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ
ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ ||
ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ
ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ ||
ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ
ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ ||
ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ
ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ ||
ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ
ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ ||
ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ
ಭಾಸುರಸುರಮಯಪೀಠಗಾರತಿಯನೆತ್ತಿದರೆ||
ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ
ಕೇಶವ ನಾರಾಯಣಗಾರತಿಯನೆತ್ತಿದರೆ ||
ಸಕಲಸುರರನಾಳ್ದನಿಗೆ ನಿಖಿಳ ಖಳರ ಸೀಳ್ದನಿಗೆ
ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ ||
ಮತ್ಸ್ಯ ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ
ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ||
ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ
ಪಂಕಜಮುಖಿಯರು ಮಂಗಳಾರತಿಯೆತ್ತಿದರೆ ||

No comments:

Post a Comment