Tuesday, 17 December 2019

ಮಧ್ವಮುನಿಯೇ ನಮ್ಮ ಗುರು madhwamuniye namma guru

ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ ||
ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ ||
ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ-
ವಿಂದವ ಸೇವಿಸುತ ಆನಂದದಿಂದ ಶೋಭಿಸಿದ ||
ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ-
ಮಾಣಿಕ್ಯವಾಗಿ ಹರಿಗೆ ಪ್ರಾಣನೆಂದೆನಿಸಿದ ||
ಕಟ್ಟಕಡೆಯಲಿ ಯೋಗಿ ದಿಟ್ಟನಾಗಿ ಪುರಂದರ
ವಿಟ್ಠಲ ವೇದವ್ಯಾಸರ ಪೆಟ್ಟಿಗೆ ಮುಂದೊಪ್ಪುತಿಹ ||

No comments:

Post a Comment