Monday, 30 December 2019

ಮದ್ದು ಮಾಡಬಾರದೇನೇ maddu maadabaradene

ಮದ್ದು ಮಾಡಬಾರದೇನೇ ಮುದ್ದು ಮಾಯಾದೇವಿ ? ಪ.
ಮುದ್ದು ಬಾಲಕೃಷ್ಣನಲ್ಲಿ ಮನಸು ನಿಲ್ಲುವ ಹಾಗೆ ಅಪ
ಕರಗಳಿಂದ ಹರಿಯ ಮಂ ದಿರದ ಕಸವ ತೆಗೆಯಲಿಕ್ಕೆ |
ನಿರುತದಲ್ಲೂ ಬೇಸರಿಯದೆ ಹರುಷವು ಪುಟ್ಟವ ಹಾಗೆ 1
ಶ್ರುತಿ - ರಾಮಾಯಣ ಶ್ರೀ ಭಾಗವತ ಪಂಚರಾತ್ರಾಗಮಾದಿ
ಕಥೆಯ ಕೇಳುವುದಕೆ ಬಹಳ ರತಿಯು ಪುಟ್ಟುವ ಹಾಗೆ 2
ದೇಹವು ಅನಿತ್ಯವೆಂದು ನೇಹದಿಂದ ಪೋಷಿಸದಲೆ |
ಮಾಹೇಂದ್ರಾವರಜನ ಅಹ ರಹರವು ಭಜಿಸುವ ಹಾಗೆ 3
ನರರ ಸ್ತವನ ಹೇಯವೆಂದು ಅರಗಳಿಗೆಯು ಅಗಲದಲೆ |
ನರಹರಿಯ ಭಕ್ತರಿಗೆ ಶರಣುಹೋಗುವ ಹಾಗೆ 4
ಮನಸು ವಾಕ್ಕಾಯಗಳಿಂದ ಸದ್ ಗುಣದಿ ಪುರಂದರವಿಠಲನ
ಅನುರಾಗದಿಂ ಬಿಡದೆ ಪಾಡಿ ಕುಣಿದು ಕುಣಿದು ದಣಿವ ಹಾಗೆ 5

No comments:

Post a Comment