Tuesday, 17 December 2019

ಇದೇ ಪೇಳಿ ಪೋದರು ವಿಧುವದನೆ ide heli pidaru vibhudarane


ಇದೇ ಪೇಳಿ ಪೋದರು ವಿಧುವದನೆ
ನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪ
ಸಿರಿ ಅರಸನೆ ಈ ಧರೆಯೊಳಗುತ್ತಮ
ಮರುತ ದೇವರೆ ಜಗದ್ಗುರುಗಳೆಂದು
ತರತಮ ಪಂಚಭೇದ e್ಞÁನಶೀಲನೆ
ಸುರಲೋಕವಾಸಿ ಶ್ರೀ ಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1
ಜರದೂರ ನರಹರಿ ಧರೆಯೊಳು ವ್ಯಾಪಿಸಿ
ಇರಲು ತ್ರಿಗುಣ ಕಾರ್ಯವಾಹವೆನ್ನುತಾ
ಪರತಂತ್ರ ಜೀವವೆಂದರಿದು ಪಾಪ ಪುಣ್ಯ
ಸರಸಿಜನಾಭನಿಗರ್ಪಿಸಿ ಒಟ್ಟಿಗೆ ಬರಬೇಕು ಯೆಂದು 2
ಸಿರಿಗೋವಿಂದ ವಿಠಲ ವಿಶ್ವವ್ಯಾಪಕ
ಗಿರುವವು ಎರಡು ಪ್ರತಿಮೆ ಜಗದಿ
ಚರ ಅಚರಗಳನ್ನು ಅರಿತು ಮಾನಸದಲ್ಲಿ
ಹರಿ ಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆ

ಪೇಳಿ ಪೋದರು 3

No comments:

Post a Comment