Thursday, 26 December 2019

ಹ್ಯಾಂಗೆ ನಿಮ್ಮ ಚರಣಾ hyange nimma charana

ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ
ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ.
ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | e್ಞÁನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1
ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2
ಸಾಕು ಭವದ ಸಂಗಾ | ಗರ್ಭದೊಳ್ಹಾಕದಿರೆಲೊ ರಂಗಾ ||ಶ್ರೀಕರ ಉತ್ತುಂಗ | ಕರುಣಿಸಬೇಕು ಕೃಪಾ ಪಾಂಗಾ ||ಧಿಕ್ಕರಿಸುವದಿನ್ಯಾಕೆ ಪೇಳುವೆ ಕರುಣಾಕರ ಎನ ವಾಕು ಪಾಲಿಸೊ ಹರೆ 3
ಎಲ್ಲಿ ನೋಡಲು ನಿನ್ನಾ | ಸರಿಇಲ್ಲ ಕೇಳು ಚೆನ್ನಾ ||ಫುಲ್ಲನಾಭನೆ ಎನ್ನಾ | ಕಾಯಿದುಎಲ್ಲಿ ನೋಡಲು ದಯ ಸಲ್ಲಿಸಿ ಎನ್ನಯಸೊಲ್ಲು ಲಾಲಿಪುದು ಮಲ್ಲಮರ್ದನ ಕೃಷ್ಣ 4
ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5

No comments:

Post a Comment