Saturday, 7 December 2019

ಹರಿಮುಖಿ ಹರಿವಾಣಿ harimukhi harivani

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿಹರಿಮಧ್ಯೆ ಹರಿಗಮನೆ ಪ
ಹರಿಯ ನಂದನ ಸಖನೆನಿಪ ಅಹೋಬಲದಹರಿಯ ನೀ ತಂದು ತೋರೆ ಅ
ಎರವಿನ ತಲೆಯವನಣ್ಣನಯ್ಯನಪರಮ ಸಖನ ಸುತನಹಿರಿಯಣ್ಣನಯ್ಯನ ಮೊಮ್ಮನ ಮಾವನತಂದೊಟ್ಟಿದನ ಹಗೆಯಗುರುವಿನ ಮುಂದೆ ಮುಂದಿಹ ಬಾಹನಕಿರಿಯ ಮಗನ ರಾಣಿಯದುರುಳತನದಿ ಸೆಳೆದುಕೊಂಡನ ಕೊಂದನತರಳೆ ನೀ ತಂದು ತೋರೆ 1
ಸೋಮನ ಜನಕನ ಸತಿಯ ಧರಿಸಿದನರೋಮ ಕೋಟಿಯೊಳಿಟ್ಟಹನಕಾಮಿನಿ ಸತಿಯ ಕಂದನ ತಮ್ಮಗೊಲಿದನಭಾಮೆ ನೀ ತಂದು ತೋರೆ 2
ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯಪಥದೊಳು ತಿರುಗಿದನ ಅತಿಶಯ ನರಹರಿ ವಾಮನ ರೂಪಿನಪಿತನ ಮೋಹದ ರಾಣಿಯ ಹತ ಮಾಡಿ ಸತ್ಯಕ್ಕೆ ನಿಂತು ನಗವ ಹೊತ್ತುಪತಿವ್ರತೆಯರ ಭಂಗಿಸಿಕ್ಷಿತಿಯೊಳು ರಾಹುತನಾದ ಬಾಡದಾದಿಕೇಶವನ ತಂದು ತೋರೆ3

1 comment:

  1. ಈ ಮೇಲಿನ ದೇವರನಾಮದ ಪ್ರತಿಪದದ ಅರ್ಥ ತಿಳಿಸಲು ಕೋರಿಕೆ.

    ReplyDelete