ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಪ
ಗುರುಮಂತ್ರ ಮೂಲ ಸದ್ಗುರು ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆಅ
ಮೊದಲು ನಿಮ್ಮುಪದೇಶ ನದರು ಮಾಡದೆ ಇರಲುಅದನೆಲ್ಲ ಮನ್ನಿಸಿದೆ ಹರಿಯೆಮುದದಿಂದ ನೀ ಬಂದು ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ 1
ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ 2
ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ 3
ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ4
ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ5
ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ6
ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ 7
ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ8
ನೀರ ಸಂಗವ ಬಿಟ್ಟು ಆಣಿ ಮುತ್ತಾದಂತೆಸೇರಿಸಿದೆ ತವ ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ 9
No comments:
Post a Comment