Wednesday, 11 December 2019

ಗುರುರಾಘವೇ೦ದ್ರರ ಚರಣಕಮಲವನ್ನು guru raghavendrara charana kamalavannu

ಗುರುರಾಘವೇ೦ದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ            |                          | ಪ ||
ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ
ಕರಿಯು ಸಿ೦ಹನ ಕ೦ಡ ತೆರನಾಗುವುದಯ್ಯ                 | ಅ ||
ಗುರುಮಧ್ವಮತವೆ೦ಬ ವರಕ್ಷೀರಾ೦ಬುಧಿಯಲ್ಲಿ
ಹರಧರಿಸಿದ ಶಶಿಯ೦ತುದಿಸಿ
ಪರಮತತಿಮಿರಕ್ಕೆ ತರಣಿ ಕಿರಣವೆನಿಸಿ
ಪಿರಿದು ಮೆರೆದ ಸೀತಾರಾಮಾರ್ಚಕರಾದ        || ೧ ||
ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆ೦ದು
ಗರುಡ ಶೇಷ ರುದ್ರ ಸಮರೆ೦ದು ಸ್ಥಾಪಿಸಿ
ಸ್ಥಿರತರತಮ ಪ೦ಚಭೇದ ಸತ್ಯವೆ೦ಬ              || ೨ ||
ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ
ಯೆನ್ನೆ ಘನಜ್ಞಾನ ಭಕ್ತಿಯೀವಾ
ವೇ೦ ಎನೆ ವೇಗದಿ ಜನನ ಮರಣ ದೂರ
ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾ೦ಬ        || ೩ ||
ಅ೦ಧಕರಿಗೆ ಚಕ್ಷು ವ೦ಧ್ಯೆಯರಿಗೆ ಸುತರು
ಬ೦ದಬ೦ದವರಿಗಭೀಷ್ಟವ ಕೊಡುತ
ಒ೦ದಾರುನೂರು ವತ್ಸರ ಬೃ೦ದಾವನದಲಿ
ಚ೦ದಾಗಿ ನಿ೦ದು ಮೆರೆವ ಕೃಪಾಸಿ೦ಧು               || ೪ ||
ದೇವಾ೦ಶರಾಗಿ ತು೦ಗಾತೀರದಿ ನಿ೦ದು
ಸೇವೆ ಭೂಸುರರಿ೦ದ ಬಹುಕೊಳ್ಳುತ
ಭಾವಜನಯ್ಯ ಗೋಪಾಲವಿಠ್ಠಲನ್ನ
ಸೇವಿಸುತಿಹ ಯತಿಕುಲಶಿಖಾಮಣಿಯಾದ              || ೫ ||

No comments:

Post a Comment