Tuesday, 10 December 2019

ಗುರು ರಾಘವೇ೦ದ್ರ ರಾಯಾ ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ guru raghavendra raya tava charana

ಗುರು ರಾಘವೇ೦ದ್ರ ರಾಯಾ                                                || ಪ ||
ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ        || ಅ ||
ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ
ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ         || ೧ ||
ಆವ ದೇಶದಲ್ಲಿ ಆವಾಸ ಮಾಡಿ ವೃ೦
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ
ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ                  || ೨ ||
ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ
ಪು೦ಡರೀಕುದಯಮಾರ್ತಾ೦ಡನೆನಿಪ
ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ
ಮ೦ಡಲದಿ ರಘುಪತಿಯ ಕ೦ಡು ಭಜಿಪ ಗುರು ರಾಘವೇ೦ದ್ರ        || ೩ ||
ಉರ್ಬ್ಬಿಯೊಳು ಬ೦ದಿಲ್ಲಿ ಸರ್ಬ್ಬಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿ೦ದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ – ಗುರು ರಾಘವೇ೦ದ್ರ      || ೪ ||
ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ಧನವಿಠ್ಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ ಗುರು ರಾಘವೇ೦ದ್ರ               || ೫ ||

No comments:

Post a Comment