ಎತ್ತಿದಳಾರತಿಯಾ ಶ್ರೀ ತುಳಸಿಗೆ | ಭಕ್ತಿ ಭಾವಗಳಿಂದಲಿ ||ಪ||
ಎತ್ತಿದಳಾರತಿ ಸತ್ಯಾಧರ್ಮನ ಸತಿ | ಅಚ್ಯುತನ ತೋರೆಂದು ಅತಿ ದೈನ್ಯದಿಂದಲಿ || ಆ. ಪ.||
ಗಂಧ ಅರಿಶಿನ ಕುಂಕುಮ | ಪಾಂಚಾಲಿ ತಾ ವೃಂದಾವನ ಪೂಜಿಸಿ ||
ದುಂಡು ಮಲ್ಲಿಗೆ ಕರ್ಪೂರ ಧೂಪ ದೀಪಗಳಿಂದ | ಇಂದ್ರ ನಂದನ ಸತಿ ಒಂದೇ ಮನಸಿನಿಂದ || 1 ||
ಹಾರ ಕೇಯೂರದಿಂದ|ಮುಕ್ತಾವಳಿ ನಾರಿ ತುಳಸಿಗೆ ಆರ್ಸಿಸಿ||
ಚಾರು ಹಸ್ತಗಳಿಂದ ನಾರಿ ಬೊಗಸೆಯ ಒಡ್ಡಿ | ವಾರಿಜನಾಭನ ತೋರಿಸೆಂದೆನುತಲಿ || 2 ||
ಅನ್ನ ಬೇಡಲು ಮುನಿಗಳು | ಪತಿಗಳು ಬಂದು ನನ್ನನ್ನೇ ಕೇಳುವರು |
ಪನ್ನಂಗವೇಣಿ ನಾ ನಿನ್ನ ಮೊರೆ ಹೊಕ್ಕೇನೆ | ಅನ್ನಾಂಗ ಶಯನನ ತೋರು ತೋರೆನುತಲಿ || 3 ||
ಕ್ಷುದದಿಂದಾದವರು ತಪಸಿಗಳೆಂದು ಪತಿಗಳು ಹೇಳಿದರು |
ಪತಿದಾಯಕಿ ನಿನ್ನ ಪತಿ ಶ್ರೀ ಕೃಷ್ಣನ್ನ | ಅಚ್ಯುತಾನಂತನ ತೋರೆಂದು ತುಳಸಿಗೆ || 4 ||
ಬೇಡಿದ ಭಕ್ತರಿಗೆ ಶ್ರೀ ತುಳಾಸಿಯು|ಸಾಯುಜ್ಯ ಪದವಿ ನೀಡಿ||
ವಾರಿಜ ನಾಭನ ತೋರುವೆನೆನುತಲಿ | ತೋರಿದಳು ಭೀಮೇಶ ಕೃಷ್ಣನ ಸತಿ ತುಳಸಿಗೆ || 5||

No comments:
Post a Comment