Friday, 13 December 2019

ಈ ಮತ್ರ್ಯದೊಳಗಿಲ್ಲ eematsyolagilla

ಈ ಮತ್ರ್ಯದೊಳಗಿಲ್ಲ ಅರಸಿ ನೋಡಲು ದೇವ |
ಅರಸು ಮೆಚ್ಚಲು ಪ್ರಜೆ ದ್ವೇಷಿಸುವರು |
ಆಳುಗಳು ಒಲಿದಲ್ಲಿ ಅರಸು ಮೆಚ್ಚನು ಒಮ್ಮೆ |
ಈ ಮತ್ರ್ಯ ಜನರ ಚರಿತವು ಎಲೊ ರಂಗ |
ಮೂಲೋಕದರಸು ನೀ ನಿನ್ನಯ ಭಕ್ತ ಜನರುಗಳು |
ನೀ ಕರುಣಿಸಲು ತಾವು ಕರುಣಿಸುವರು |
ನೀನೊಲಿಯದಿರೆ ಒಮ್ಮೆಯೂ ತಿರುಗಿ ನೋಡರು ಹರಿಯೆ |
ಈ ಪರಿಯ ನಿನ್ನ ಆಜ್ಞೆಯಲಿ ಈ ಮಹಾವಿಭವದೊಳು |
ಆರು ಮೊರೆಯಾಗುವರು ಆರು ರಕ್ಷಿಪರೆನ್ನ |
ಆರಂಜದಿರೆಂದು ಅಭಯವನೀವರ ಕಾಣೆ |
ಶ್ರೀನಾಥ ಅನಿಮಿತ್ತ ದಯಾಸಿಂಧೂ |
ನಿನ್ನ ದಾಸರ ಒಲುಮೆಯ ಪಾಲಿಸೊ ಗುಣನಿಧೆ |
ನಿನ್ನ ಚರಿತಾಮೃತವ ತೋರಿ ಸಲಹಯ್ಯ |
ಪ್ರಸನ್ನ ಮೂರುತಿ ಅಹೋಬಲ ನಿಲಯ
ಪುರಂದರ ವಿಠಲರಾಯ 1
ಮಟ್ಟತಾಳ
ಜಯ ಜಯ ಬದರಿಕಾಶ್ರಮ ನಾರಾಯಣ |
ಜಯ ಜಯ ಬಾದರಾಯಣ ಪ್ರವೀಣ |
ಜಯ ಜಯ ಪ್ರಯಾಗದಲಿಪ್ಪ ನಾರಾಯಣ |
ಜಯ ಜಯ ಕಾಶೀ ಬಿಂದು ಮಾಧವನೇ |
ಜಯ ಜಯ ಜಗನ್ನಾಥ ಸಿಂಹಾದ್ರಿ |
ಜಯ ಜಯ ಆಹೋಬಲ ನಾರಸಿಂಹ |
ಜಯ ಜಯ ತಿರುಮಲರಾಯ ಜಯ ಕಂಚೀವರದ |
ಜಯ ಜಯ ರಂಗನಾಥ ಶ್ರುತಿ ಗೀತ |
ಜಯ ಸೇತುರಾಮ ಜಯ ಪದ್ಮನಾಭ |
ಜಯ ಜಯ ಜಯಾ ಮುದ್ದು ಉಡುಪಿ ಕೃಷ್ಣ |
ಜಯ ಜಯ ಪುಂಡರೀಕ ಮುನಿವರದ ಪುರಂದರ ವಿಠಲ 2
ತ್ರಿವಿಡೆ ತಾಳ
ಜಯ ಗದಾಧರ ಜಯ ಜಯ ಜಗದೀಶ |
ಜಯ ಸೇತುವಿನಲಿ ರಾಮ |
ಜಯ ಸೋದೆಯಲಿ ನೆಲಸಿ ಮೆರೆವ ತ್ರಿವಿಕ್ರಮರಾಯ |
ದ್ವಾರಾವತಿಯ ಗೋವಿಂದ ಜಯ
ವಾದಿರಾಜ ಪ್ರಿಯ ಹಯವದನ
ಜಗದ್ದೇವನೇ ಜಯಮಧ್ವ ಗುರುವರದನೇ |
ಜಯ ಜಯ ಕರುಣಾಕರ ಜಯ ಜಯ ಕಮಲನಾಭ |
ಜಯ ಜಯ ಕಂಬುಕಂಠ ಕೌಸ್ತುಭಧರನೇ |
ಜಯ ಜಯ ಮರಕತ ಮಕರ ಕುಂಡಲಧರನೆ |
ಅನಂತಾನಂತ ಗುಣ ನಿಲಯ ಅನಂತಾನಂತ ರವಿಶತತೇಜ |
ಅನಂತಾನಂತ ಪುರಂದರ ವಿಠಲ ನಮೋ ನಮೋ 3
ಅಟ್ಟತಾಳ
ಕ್ಷೀರ ಸಾಗರಕೆ ಶ್ರೀ ಹರಿಯು ಬಂದಂತೆ |
ಪ್ರಹ್ಲಾದನಲ್ಲಿಗೆ ನರಸಿಂಹ ಬಂದಂತೆ |
ಬಲಿಯ ಮನೆಗೆ ವಾಮನ ಬಂದಂತೆ |
ಅಕ್ರೂರನ ಮನಗೆ ಶ್ರೀ ಅಚ್ಯುತ ಬಂದಂತೆ |
ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ |
ಗೋಪಿಯರ ಮನೆಗೆ ಗೋಪಾಲ ಬಂದಂತೆ |
ಲಕ್ಷ್ಮೀಪತಿ ಪುರಂದರ ವಿಠಲ ದಿವ್ಯನಾಮವು |
ಎನ್ನ ನಾಲಗೆಗೆ ಬಂದು ನೆರೆದಿತು 4
ಏಕತಾಳ
ಕೃಷ್ಣಾ ಕೃಷ್ಣಾ ಎಂಬುದಕೆ |
ಅಂತ್ಯ ಕಾಲದಿ ಮೊದಲಾ ಶಬ್ದಕೆ |
ನಾಮವು ಮುದದಿ ಮುಕ್ತಿಯ ತೋರಿತು |
ಇದು ಎನ್ನ ಮನಸಿನ ಮಾಯೆಯೇನೂ ಇಲ್ಲದೆ |
ನಾಚಿಕೆ ಎನ್ನ ಪ್ರತೀಕ್ಷಿಸದಯ್ಯಾ ಪುರಂದರ ವಿಠಲ |
ನಿಮ್ಮ ತ್ರಾಣಿಯಾದವನ 5
ಜತೆ
ಹೊಕ್ಕುಳಲಿ ಗಂಡು ಪೆತ್ತವರುಂಟೆ |
ಉಂಗುಷ್ಟದಲಿ ಪೆಣ್ಣ ಪೆತ್ತವರುಂಟೆ |
ಮಿಕ್ಕಲಾದ ದೇವರಿಗೆ ಈ ಸೌಭಾಗ್ಯವುಂಟೆ |
ಮೊರೆ ಹೊಕ್ಕೆ ಮೊರೆ ಹೊಕ್ಕೆ ಪುರಂದರ ವಿಠಲ ||

No comments:

Post a Comment