ಧೂಪಾರತಿಯ ನೋಡುವ ಬನ್ನಿ ||ಪ||
ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ ||ಅ.ಪ||
ಮುತ್ತು ಛತ್ರ ಚಾಮರ ಪತಾಕ ಧ್ವಜ
ರತ್ನ ಕೆತ್ತಿಸಿದ ಪದಕ ಹಾರಗಳು
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ
ಸತ್ಯಭಾಮೆ ರುಕ್ಮಿಣಿಯರಸ ಶ್ರೀ ಕೃಷ್ಣನ||1||
ರತ್ನ ಕೆತ್ತಿಸಿದ ಪದಕ ಹಾರಗಳು
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ
ಸತ್ಯಭಾಮೆ ರುಕ್ಮಿಣಿಯರಸ ಶ್ರೀ ಕೃಷ್ಣನ||1||
ಢಣ ಢಣ ಢಣವೆಂಬ ತಾಳ ದಂಡಿಗೆ ಭೇರಿ
ಝಣಕು ಧಿಮಿಕು ಎಂಬ ಮದ್ದಳೆಯ
ಝಣ ಝಣಿಸುವ ರವ ವೀಣೆ ಕಿನ್ನರಿ ಸ್ವರ
ಘನ ರಾಗದಿಂದಲಿ ಹಾಡುತ ಪಾಡುತಲಿ||2||
ಝಣಕು ಧಿಮಿಕು ಎಂಬ ಮದ್ದಳೆಯ
ಝಣ ಝಣಿಸುವ ರವ ವೀಣೆ ಕಿನ್ನರಿ ಸ್ವರ
ಘನ ರಾಗದಿಂದಲಿ ಹಾಡುತ ಪಾಡುತಲಿ||2||
ಷಡಪಂಚ ಘಂಟೆ ಝಾಗಟೆಯು ಮೊದಲಾದ
ದೃಢವಾದ ವಾದ್ಯ ಮಂಗಳದಿನದಲ್ಲಿ
ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ
ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ||3||
ದೃಢವಾದ ವಾದ್ಯ ಮಂಗಳದಿನದಲ್ಲಿ
ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ
ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ||3||
ಹರಿ ಸುರಪತಿ ವಿರಿಂಚಿಜನಕ
ಪರಮ ಮೂರುತಿ ಪುರುಷೋತ್ತಮನ
ಪರದೈವವೆಂಬ ಶ್ರೀ ರಂಗನಾಥನಾದ
ಪುರಂದರ ವಿಠಲ ದೇವರ ಪೂಜೆಯ||4||
ಪರಮ ಮೂರುತಿ ಪುರುಷೋತ್ತಮನ
ಪರದೈವವೆಂಬ ಶ್ರೀ ರಂಗನಾಥನಾದ
ಪುರಂದರ ವಿಠಲ ದೇವರ ಪೂಜೆಯ||4||
No comments:
Post a Comment