Friday, 27 December 2019

ದಯ ಮಾಡೊ ಪ್ರೀಯಾ days maado priya

ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ
ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1
ನೆರೆ ನಂಬಿದವರಿಗೆ ದುರಿತ ರಾಶಿಯ ಕಳೆದುಪರಿ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2
ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3
ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4
ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5

No comments:

Post a Comment